#ಹನಿ ಕಥೆ

ಅತ್ತೆಯ ಸಲಹೆ

0

ಸಾಫ್ಟ್ ವೇರ್ ಇಂಜಿನಿಯರಗಳಾಗಿ ಅಮೆರಿಕಾದಲ್ಲಿ ನೆಲಸಿದ್ದರು ಮಗ ಮತ್ತು ಸೊಸೆ. ಸೊಸೆಯಿಂದ ಒಮ್ಮೆ ಅತ್ತೆಮ್ಮಗೆ ದೂರವಾಣಿ ಕರೆ ಬಂದಿತು. ಸೊಸೆ ಕೇಳಿದಳು- “ಅತ್ತೆಮ್ಮ! ಆಫೀಸಿಗೆ ಹೋಗುವ ಮುನ್ನ ನನ್ನ ದೊಡ್ಡ ಕೂದಲನ್ನು ಬಾಚಿ ಜಡೆ ಹಾಕಿ ಕೊಂಡು ಹೋಗಲು ಕಷ್ಟವಾಗಿದೆ. ನಾನು ಬಾಯ್ ಕಟ್ ಮಾಡಿಸಿ ಕೊಳ್ಳಲೇ?” ಎಂದಳು. ನೀನು ಯಾವ ಕಟ್ ಆದರು ಮಾಡಿಸಿಕೊ […]

#ಕವಿತೆ

ಬೆವರಿನ ಹಾಡು

0

ಭೂಮಿ ಒಳಗಿಂದ ಆಕಾಶ ಕಂಡವರು ಆಕಾಶದೊಳಗಿಂದ ಭೂಮಿಯ ಕಡೆದವರು ಕೆಲಸ ಕೊಟ್ಟವರನ್ನು ಮುಂದೆ ತಂದವರು ಕೆಲಸ ಮಾಡುತ್ತಲೇ ಹಿಂದೆ ಉಳಿದವರು. ಮುಟ್ಟಬಾರದು ಎಂದರೂ ಇತಿಹಾಸ ಕಟ್ಟಿದರು ಊಳಿಗದ ಸೆರೆಯಲ್ಲಿ ಉಸಿರನ್ನೆ ಉಂಡವರು ಬೆವರಿನ ಮಸಿಯಲ್ಲಿ ಬದುಕನ್ನು ಬರೆದವರು ಭೂಮಿ ಬಸಿರಲ್ಲಿ ಬದುಕನ್ನು ಹೆತ್ತವರು ಒಲೆಯ ಉರಿಯಲ್ಲಿ ಕಲೆಯನ್ನು ಕಂಡವರು ಕತ್ತಲಿನ ಒಡಲಲ್ಲಿ ಬೆಳಕನ್ನು ಹುಡುಕಿದರು ಕರುಳಾಗಿ […]

#ಕವಿತೆ

ಆ ದೇವರಿತ್ತ ಈ ವರವ

1

ಆ ದೇವರಿತ್ತ ಈ ವರವ ನೀನೆಂದು ಭಾವಿಸಿ ನಿನ್ನ ಪ್ರೀತಿಸುವೆ| ನಿನ್ನ ಒಳಿತಿಗಾಗೆನ್ನ ಜೀವನವ ಮೀಸಲಿಡುವೆ| ಓ ನನ್ನ ಮಗುವೇ|| ಎಷ್ಟೇ ಕಷ್ಟವು ಬಂದರೆ ನನಗೆ ನೆರಳಾಗಿ ನಾನಿರುವೆ ನಿನ್ನ ಜೊತೆಗೆ| ಕಣ್ಣರೆಪ್ಪೆಯಂದದಿ ಕಾಯುವೆಹೊರಗೆ ತಾಯಿಯ ಪ್ರೀತಿಯನೆಲ್ಲವಾ ಧಾರೆಯೆರೆಯುವೆ ನಿನಗೆ| ಉಳಿದಿರುವೆ ನೀನೊಬ್ಬಳೆ ನನ್ನಯ ಪಾಲಿಗೆ| ನಾಳಿನ ಭರವಸೆ ನೀನೆನಗೆ|| ಚಿಂತಿಸದಿರು ನೀ ಅಪ್ಪನಾ ನೆನೆ […]

#ವಿಜ್ಞಾನ

ಶುದ್ಧ ರಕ್ತಕ್ಕೂ ಬರ ಬರಬಹುದೆ?

0

ಜಾಗತಿಕ ಹತೋಟಿಗೆ ಯಾವುದೇ ವ್ಯಾಪಾರಿ ನಿರ್ಬಂಧಗಳಿಲ್ಲದಿರುವುದರಿಂದ ಕೀಟನಾಶಕಗಳು ಪರಸ್ಪರ ದೇಶ- ವಿದೇಶಗಳಿಗೆ ರಫ್ತಾಗುತ್ತಲೇ ಇರುತ್ತವೆ. ಇದರ ದುಷ್ಪರಿಣಾಮ ಮೊದಲಿಗೆ ಅಷ್ಟೇನೂ ಕಂಡು ಬಂದಿಲ್ಲವಾದರೂ ಈದೀಗ ವಿಶ್ವಸಂಸ್ಥೆಯ ಆರೋಗ್ಯ ಘಟಕವು ಈ ಕೀಟನಾಶಕಗಳಿಂದ ಜೀವರಾಶಿಗಳ ಮೇಲೆ ಆಗುವ ಅಪಾಯವನ್ನು ಮನಗಂಡಿದೆ. ಬಂಡವಾಳಶಾಹಿ ನಾಡುಗಳು ಕೀಟನಾಶಕ ನಂಜನ್ನು ಅಭಿವೃದ್ಧಿ ಶೀಲನಾಡುಗಳಿಗೆ ಅಗತ್ಯಕ್ಕಿಂತ ಹೆಚ್ಚಿಗೆ ಕಳಿಸುತ್ತಿರುವುದು ಅಪಾಯಕಾರಿಯಾಗಿದೆ. ಇದನ್ನು ವಿಶ್ವಸಂಸ್ಥೆಯ […]

#ವಚನ

ಒಂದೆ ತರ್ಕದಳೆಯೊಳಗೆಲ್ಲ ವಿಷಯಗಳಿರುವುದೆಂತು ?

0

ಒಂದು ಕವನಕಿನ್ನೊಂದು ಕವನಕುಂ ತರ್ಕ ಸಂಬಂಧವಿಲ್ಲದೊಡದೆನ್ನ ದೋಷವಿರಬಹುದಾದೊ ಡಂ ಪ್ರಕೃತಿಯೊಳಿಂಥ ತರ್ಕ ದೋಷಗಳಿರುತಿರಲು ಒಂದೆ ಸೂತ್ರದೊಳೆಲ್ಲ ಮರ, ಗಿಡ, ಬಳ್ಳಿ, ಕಳ್ಳಿ, ಕಳೆ ಕಂಟಿಗಳಿಲ್ಲದಿರುತಿರಲೆನ್ನ ದೋಷವನಿವಾರ್‍ಯ ಸಂಗತಿಯು – ವಿಜ್ಞಾನೇಶ್ವರಾ *****

#ಕವಿತೆ

ಇಲ್ಲ! ಬರಲಿಲ್ಲ!

0

ಇಲ್ಲ ! ಬರಲಿಲ್ಲ ಆ ದಿನ ಬರಲಿಲ್ಲ. ಸಾಲು ಸಾಲು ಮೇಘ, ಮಾರುತಗಳ ಬರಳೊರಳಿಸಿ ಗುಡುಗು, ಮಿಂಚುಗಳ ಬಾಣ, ಬಿರುಸಿನ ಮಾಲೆ ಹೊತ್ತಿಸಿ ಗಿಡ, ಮರಗಳ ಬುಡ ನಡುಗಿಸಿ ತಲೆ ಕೊಡವಿಸಿ ಏಕಕಾಲಕೆ ಗಲಿಬಿಲಿ, ಸಂತಸ ಹುಟ್ಟಿಸಿ ಜನ, ದನ, ಕ್ರಿಮಿ, ಕೀಟ ಪಕ್ಷಿಗಳ ತಾರಾಡಿಸಿ ಬಾನು, ಭುವಿಯನು ಬೆಸೆವ ಕೆಂದೂಳ ಸೇತುವೆಯನೆಬ್ಬಿಸುವ ಮಳೆ ಗಾಳಿ […]

#ಸಣ್ಣ ಕಥೆ

ಅವಳೊಬ್ಬಳು ಅಹಲ್ಯೆ

0

ಅವಳು ಕಿಟಕಿಯಿಂದ ಹೊರಗಿನ ಕತ್ತಲನ್ನು ನೋಡುತ್ತಿದ್ದಳು. ಮನೆಯ ಲೈಟನ್ನು ಆರಿಸಿ ಕತ್ತಲಲ್ಲಿ ನಿಂತು ಕತ್ತಲನ್ನು ನೋಡುವುದನ್ನು ಅವಳು ಅಭ್ಯಾಸ ಮಾಡಿಕೊಂಡಿದ್ದಳು. ಹೊರಗಿನ ಕತ್ತಲೆಯಿಂದ ಎದ್ದು ಬಂದವನೊಬ್ಬ ಒಳಗಿನ ಕತ್ತಲೆಯನ್ನು ಹೋಗಲಾಡಿಸಬಾರದೇ ಎಂದು ಹಂಬಲಿಸುತ್ತಿದ್ದಳು. ಮದುವೆಯಾಗಿ ಮೂರು ವರ್ಷಗಳು ಉರುಳಿವೆ. ಎಷ್ಟೊಂದು ಕತ್ತಲರಾತ್ರಿಗಳನ್ನು ಅವಳು ಹಾಗೆ ಕಳೆದಿಲ್ಲ? ಗಂಡ ಸೋಮಯ್ಯ ಬೆಂಗಳೂರಿನಲ್ಲಿರುತ್ತಿದ್ದುದೇ ಹೆಚ್ಚು. ಮುತ್ತಮ್ಮ ಇಲ್ಲಿ ಹಗಲಲ್ಲಿ […]

#ಕವಿತೆ

ಭುವನ ಸುಂದರಿ

0

ಎಲ್ಲರೂ ಬೆಚ್ಚಗೆ ಹೊದ್ದು ಮಲಗಿರಲು ಇವಳು ಎದ್ದು ಜಿಮ್‌ನಲ್ಲಿ ಬೆವರು ಸುರಿಸುತ್ತಾ ಕಸರತ್ತು ಮಾಡುವಳು ಎಲ್ಲರೂ ಹಾಲು ತುಪ್ಪದಲ್ಲಿ ಕೈತೊಳೆದರೆ- ಇವಳು ಹಣ್ಣು-ತರಕಾರಿ ಒಣಗಿದ ಚಪಾತಿಯ ಮೇಲೆಯೇ ಜೀವಿಸುವಳು ಎದುರಿಗೆ ಯಾರೂ ಇಲ್ಲ ಆದರೂ ಕೈ ಬೀಸುವಳು ಕಾರಣವೆ ಇಲ್ಲ ಸುಮ್ಮನೆ ನಗುವಳು ಬಳುಕಿ ಬಾಗಿ ಬೆಕ್ಕಿನ ಹೆಜ್ಜೆಯನನುಸರಿಸಿ ತಾಲೀಮು ನಡೆಸುವಳು ತಲೆಯೊಳಗೆ ಏನೆಲ್ಲ ತುಂಬಿಕೊಂಡು […]

#ಕಾದಂಬರಿ

ನವಿಲುಗರಿ – ೧೩

0

ಕಮಲಮ್ಮ ರಂಗನೊಂದಿಗೆ ಮನೆಯಲ್ಲಿ ಕಾಲಿಟ್ಟಾಗ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಕಾವೇರಿ ಒಬ್ಬಳು ಮೂಲೆಯಲ್ಲಿ ಕೂತು ಮ್ಲಾನವದನಳಾಗಿದ್ದಳು. ಒಬ್ಬರಿಗೊಬ್ಬರು ನಗೆಚಾಟಿಕೆಯಲ್ಲಿ ತೊಡಗಿದ್ದವರಿಗೆ ಒಳಬಂದ ತಾಯಿ ಮಗನನ್ನು ನೋಡಿ ಕ್ಷಣ ತಳಮಳ, ತಟ್ಟನೆ ಪ್ರತಿಭಟನಾ ವೇದಿಕೆ ಸಿದ್ಧ ಮಾಡಿಕೊಂಡರು. ‘ಯಾಕೆ ಈ ಕಳ್ಳನನ್ನು ಬಿಡಿಸಿಕೊಂಡು ಬಂದೆ?’ ಲಾಯರ್ ದರ್ಪದಿಂದ ಎದ್ದುನಿಂತ, ರಂಗನನ್ನು ಮನೆಯಿಂದಾಚೆಗೆ ನೂಕುವವನಂತೆ. ‘ಕಳ್ಳಕಾಕರಿಗೆಲ್ಲಾ ಈ ಮನೆಯಲ್ಲಿ […]