#ವಚನ

ಪ್ರಕೃತಿ ಎನ್ನನ್ಯಾಕೆ ಬರೆಸಿಹುದು ?

0

ಪ್ರಕೃತಿ ಎನ್ನನ್ಯಾಕೆ ಬರೆಸಿಹುದು ? ಯಾಕಾನು ಬರೆಯುವೆನೆಂದು ಕೇಳಿದೊಡೆ ಆಕಾನು ಯಾಕಷ್ಟು ತರುಲತೆಯ ಬೆಳೆಸಿಹುದೆಂ ದುಕೇಳಲು ಬೇಕು. ತರತರದ ಜೀ ವಕಾಮಕಪ್ಪಂತೇನೆಲ್ಲವನು ಬೆಳೆಸಿರ್ಪ ಪ್ರಕೃತಿಯೆ ಮತಿಯಾಗಿ ಬರೆಸಿಹುದೆನ್ನ – ವಿಜ್ಞಾನೇಶ್ವರ *****

#ಕವಿತೆ

ಕೋಣ ಮತ್ತು ನಾವು

0

ಏಕೆ ಜನುವ ಕೊಟ್ಟೆಯಮ್ಮಾ ! ಗಂಡಾಗಿ ಜನರ ದೇವರಿಗೆ ತಲೆ ಕೆಡಿಸಿಕೊಳ್ಳಲಿಕೆ. ನಾನು ಹುಟ್ಟಿದ ಕೂಡಲೆ ಮಾರಿದೇವಿಯ ಒಳಿತು ಕೋರಿ ಹರಕೆ ಕಟ್ಟಿ, ಕಾಲು ತೊಳೆದು ಬಿಟ್ಟರು ಸಾಕಿದ್ದಕ್ಕೆ ಸುಂಕವಾಗಿ ಪ್ರಾಣ ಕೇಳುವ ಜನರು. ನಾನು ಕೋಣ! ಉಬ್ಬಿ ಹೋದೆ ದುಡಿಸಿ ದಣಿಸದೆ ತಿಂದು ತಿರುಗಾಡಿಕೊಂಡು ಬೆಳೆಯಲು ಬಿಟ್ಟಿದ್ದಕ್ಕೆ; ಗೊತ್ತಾಗಲಿಲ್ಲ ಆಗ ಇದರ ಹಿಂದಿನ ಹಿಕ್ಮತ್ತು. […]

#ಕಿರು ಕಥೆ

ಎರಡು ಪರಿವಾರಗಳು

0

ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ ಹಸಿರಾದ ಎಲೆ ಚಿಗುರು; ಒತ್ತು ಒತ್ತಾಗಿ ಬೆಳೆದ ಗಿಡಗಳಲ್ಲಿ ಬಣ್ಣ ಬಣ್ಣದ ಹೂವುಗಳು, ಕಾಯಿಗಳು, ತೋಟಕ್ಕೆ ಬೇಲಿ ಇಲ್ಲ ಗೇಟು, ಬಾಗಿಲು ಇಲ್ಲ. ಅದು ಹಕ್ಕಿಯ ಪರಿವಾರದ […]

#ಕವಿತೆ

ಬೇಡ…

0

ಭಯ ಹುಟ್ಟಿಸಬೇಡ… ಬೆಂಕಿಯ ಮುಟ್ಟಿ ನೋಡುತ್ತೇನೆ ತಡೆಯಬೇಡ… ಕಡಲೊಳಗೆ ಧುಮುಕಿ ಈಜುತ್ತೇನೆ ನಗಬೇಡ… ಬಿಸಿಲುಗುದುರೆಯನೇರಿ ಹೋಗುತ್ತೇನೆ ಅಣಕಿಸಬೇಡ… ಮರಳೊಳಗೆ ಗೂಡು ಕಟ್ಟುತ್ತೇನೆ ಎಚ್ಚರಿಸಬೇಡ… ಮೊಟ್ಟೆಗೆ ಕಾವಿಟ್ಟು ಮರಿ ಮಾಡುತ್ತೇನೆ ಮುನಿಯಬೇಡ… ಮಾರನಿಗೊಲಿದು ಮೈ ಮರೆಯುತ್ತೇನೆ ಕೀಳಬೇಡ… ಮೈದುಂಬಿ ಅರಳುತ್ತೇನೆ ಕರೆಯಬೇಡ… ಇಲ್ಲಿರಲು ಆಶೆ ಪಡುತ್ತೇನೆ ಬೇಡ… ಬೇಡ… ಬೇಡ…! ಹಿಂಬಾಲಿಸಬೇಡ ಸುಮ್ಮನೆ… *****

#ಕಾದಂಬರಿ

ಮುಸ್ಸಂಜೆಯ ಮಿಂಚು – ೪

0

ಅಧ್ಯಾಯ ೪ ವೃದ್ಧ ದಂಪತಿಗಳ ಆತ್ಮಹತ್ಯೆ ಗುಂಪಾಗಿ ನಿಂತು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಕುತೂಹಲ ಕೆರಳಿ ಗುಂಪಿನತ್ತ ನಡೆದಳು. ತನುಜಾಳನ್ನು ಕಂಡಕೂಡಲೇ ಸಮೀರ್, “ಮೇಡಮ್ ವಿಷಯ ಗೊತ್ತಾಯ್ತಾ? ಮೊನ್ನೆ ಮಗನನ್ನು ಹುಡುಕಿಕೊಂಡು ಬಂದಿದ್ರಲ್ಲ ಆ ಮುದುಕರು ಏನು ಮಾಡ್ಕೊಂಡಿದ್ದಾರೆ ಗೊತ್ತಾ?” ಎಂದ. ಏನು ಮಾಡಿಕೊಂಡಿದ್ದಾರೆ ಸಮೀರ್ ಅಂತ ಕುತೂಹಲದಿಂದ ಕೇಳಿದಳು ತನುಜಾ. ಅವ್ರಿಬ್ಬರೂ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ […]

#ಕವಿತೆ

ಒಲೆಗಳು ಬದಲಾಗಿವೆ

0

ಒಲೆಗಳು ಬದಲಾಗಿವೆ ಹೊಸ ರೂಪ, ಆಡಂಬರದ ಬಿಂಕ ಬಿನ್ನಾಣ ಮೈತೆತ್ತು ಉರಿ ಬದಲಾಗಿದೆಯೇ? ಜ್ವಾಲೆಗೆ ಹಳದಿ ಕೆಂಪು ಮಿಶ್ರಿತ ಹೊಳಪು ಕಂದಿದೆಯೇ? ಕಳೆಕುಂದಿದರೆ ಬೇಯಿಸುವ ಕೈಗಳು ಕೆಲಸ ಕಳೆದುಕೊಳ್ಳುತ್ತದೆ ಕೈಬಳೆಯ ನಿಟ್ಟುಸಿರ ಗಾಳಿಯೂ ದೀರ್ಘವಾಗುತ್ತದೆ. ಹಸಿದ ಹೊಟ್ಟೆಗಳು ಬೆಂಕಿಯುಗುಳುತ್ತವೆ. ಎಳೆಗೂಸಿನ ಹಾಲು ಸಮ ಉಷ್ಣತೆಯ ಹೀರದೆ ರೋಗಾಣು ವೈರಾಣುಗಳು ಪ್ರಾಣ ಹೀರುತ್ತವೆ. ಹೋಟೆಲ್ಲಿನ ಗಲ್ಲಾ ಪೆಟ್ಟಿಗೆಗೆ […]

#ಇತರೆ

ವಾತಾಪಿ ಜೀರ್ಣೋಭವ

0

ಇಲ್ವಲನೂ ವಾತಾಪಿಯೂ ಅಣ್ಣತಮ್ಮಂದಿರು. ರಾಕ್ಷಸ ಕುಲಕ್ಕೆ ಸೇರಿದವರಾದ ಇವರಿಗೆ ಮಣಿಮತಿಯೆಂಬ ಹೆಸರಿನ ರಾಜಧಾನಿಯಿರುವ ಸ್ವಂತದ ರಾಜ್ಯವೊಂದಿತ್ತು. ತಮಗೆ ಇಂದ್ರನಷ್ಟು ಬಲಶಾಲಿಯಾದ ಮಗ ಬೇಕೆಂದು ಅವರು ಬ್ರಾಹ್ಮಣರನ್ನು ಪ್ರಾರ್ಥಿಸಿದರೂ ಇಷ್ಟಾರ್ಥ ಸಿದ್ಧಿಯಾಗದ ಕಾರಣ ಅವರು ಬ್ರಾಹ್ಮಣದ್ವೇಷಿಗಳಾಗುತ್ತಾರೆ. ಇವರ ಬ್ರಾಹ್ಮಣದ್ವೇಷದ ಒಂದು ಮಾದರಿಯೆಂದರೆ, ಬ್ರಾಹ್ಮಣರನ್ನು ಮನೆಗೆ ತಂದು ಕೊಂದು ತಿನ್ನುವುದು. ಇದಕ್ಕೆ ಅವರು ಒಂದು ಉಪಾಯವನ್ನು ಕಂಡುಕೊಂಡಿರುತ್ತಾರೆ. ಇಲ್ವಲ […]

#ಅನುವಾದ

ಮಿಸ್ಟರ್ ಕಾಗಿಟೋ ನರಕದ ಬಗ್ಗೆ ಹೀಗೆಂದುಕೊಳ್ಳುತ್ತಾನೆ

0

ನರಕದ ತಳಾತಳದಲ್ಲಿರುವ ಸೀಮೆ. ಎಲ್ಲರೂ ಅಂದುಕೊಂಡಂತೆ ಅಲ್ಲಿ ನಿರಂಕುಶಾಧಿಕಾರಿಗಳಿಲ್ಲ. ಮಾತೃಹಂತಕರು, ಮಾತೃಗಾಮಿಗಳು, ಹೆಣಗಳನ್ನು ದರದರ ಎಳೆದಾಡಿದವರು, ದೇಶದ್ರೋಹಿಗಳು ಯಾರೂ ಇಲ್ಲ. ನರಕದ ತಳಾತಳ ಕಾಲವಿದರ ಆಶ್ರಯತಾಣ, ಎಲ್ಲೆಲ್ಲೂ ಕನ್ನಡಿಗಳು, ಸಂಗೀತ ವಾದ್ಯಗಳು, ವರ್ಣಚಿತ್ರಗಳು. ಸುಮ್ಮನೆ ನೋಡಿದರೆ ಇದು ನರಕದ ಡಿಲಕ್ಸ್ ಡಿಪಾರ್ಟ್ಮೆಂಟು ಅನ್ನಿಸುತ್ತದೆ; ಕುದಿಯುವ ಎಣ್ಣೆ ಕೊಪ್ಪರಿಗೆ ಇಲ್ಲ. ಮೈ ಕೊಯ್ಯುವ ಗರಗಸವಿಲ್ಲ. ಧಗಧಗ ಉರಿಯುವ […]