ಕವನ

#ಕವಿತೆ

ಅಪರಾಧಿಗಲ್ಲವೇ ಶಿಕ್ಷೆ?

0
ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್‍ವೇರ್ ಇಂಜಿನೀಯರ್ ಆಗಿ
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.
ಜಾನಕಿತನಯಾನಂದ

ಅಪರಾಧಿಗಲ್ಲವೇ ಶಿಕ್ಷೆ? ನಿರಪರಾಧಿಗಳಿಗೇತಕೆ ಶಿಕ್ಷೆ| ಮಾಡಿದ ತಪ್ಪಿಗಲ್ಲವೆ ದಂಡ ನೋಡಿದ ಸತ್ಯಕೇತಕೆ ದಂಡ|| ಮನುಜ ಅಧರ್ಮದಿ ನಡೆದು ತನ್ನ ಸ್ವಾರ್ಥಸಾದನೆಗೆ ಏನಬೇಕಾದರು ಮಾಡುವನು ಹೇಗೆ ಬೇಕಾದರು ಸುಳ್ಳ ಹೇಳುವನು| ಧರ್ಮದಿ ಬದುಕುವ ಜನರ ಬಲಿಪಶುವ ಮಾಡಿ ಅಟ್ಟಾಹಾಸದಿ ಮೆರೆಯುವನು|| ಕೋತಿ ಮೊಸರನು ತಿಂದು ಮೇಕೆ ಬಾಯಿಗೆ ವರಸಿದಂತೆ| ಹಣವಂತರು ಅಧಿಕಾರಿಗಳಕೊಂಡು, ಸತ್ಯಸಾಕ್ಷಾಧಾರಗಳ ತಿರುಚಲಾಗಿ| ನ್ಯಾಯ ಧರ್ಮ […]

#ವಚನ

ಪೂಜ್ಯ ತಟ್ಟೆಯೊಳಿದೇನು ಶಬ್ದ?

0

ಪೂಜಾರಿ ತನದೊಳಾನು ಅನ್ನದ ಬಯಕೆಯೊಳ್ ರಜವಿರದೆ ಮಾಡಿಹೆನು ಪ್ರಕೃತಿ ಸೇವೆಯನು ಮಜಕೆಂದೆನ್ನನುಭವವನಿಲ್ಲಿ ಬರೆದಿಹೆನು ಭಜವೆಂದವರಿವರು ಮೆಚ್ಚಿ ನುಡಿದೊಡೆ ನಿಜ ಭಜಕನೊಂದಷ್ಟು ತಟ್ಟೆ ಕಾಣಿಕೆಯಿತ್ತಂತೆ – ವಿಜ್ಞಾನೇಶ್ವರಾ *****

#ಕವಿತೆ

ನಾನಿಲ್ಲವಾಗುವೆ !

0

ಪಾಪು! ನಿನ್ನೆದುರಿನಲಿ ನಾನಿಲ್ಲವಾಗುವೆ; ಸಂಭ್ರಮಿಸುವೆ ತಾಯಿಯಂತೆ. ನಿನ್ನ ಮುದ್ದು, ಮೊದ್ದು ಮಾತುಗಳು ಸೋಲಿಸುವವು; ನಾನೀಸೂ ದಿನ ಆಡಿದ ಮಾತುಗಳ. ನಿನಗೆ ನಾನು ಮಣ್ಣು ಕುಂಬಾರನಿಗೆ ಒಪ್ಪಿಸಿಕೊಳ್ಳುವಂತೆ ಒಪ್ಪಿಸಿಕೊಂಡು ಸಂತಸದ ಐರಾಣಿಯಾಗುವೆ. ನನಗೆ ನೀನು ಆತ್ಮ ದರ್ಶನಕೆ ಪ್ರೇರಕ ನಿನಗೆ ನಾನು ಲೋಕ ದರ್ಶನಕೆ ಪೂರಕ. ನೀನು ಸುರಗಂಗೆ ನಾನು ದಾಹಿ ಅಪ್ಪುವೆ, ಪುಳಕಗೊಳ್ಳುವೆ ಪಾವನವಾಗುವೆ. ಆ […]

#ಹನಿಗವನ

ಕೆಂಡ

0
ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)

ಹೊರಗಿನ ಕೆಂಡ (ಬೆಂಕಿ) ಕಾಲು ಸುಡುತ್ತದೆ ಒಳಗಿನ ಕೆಂಡ (ಎದೆಯ ಬೆಂಕಿ) ಎದೆ ಸುಡುತ್ತದೆ ಜೊತೆಗೆ ಜೀವವನ್ನು *****

#ಕವಿತೆ

ಬೀಜ ಯಜ್ಞ

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಮರುಳ… ‘ಕುಡಿ’ಹಣ್ಣೆಂದು ಮೆಟ್ಟಿದೆಯಾ? ಹೆಂಗೂಸೆಂದು ಅಟ್ಟಿದೆಯಾ? ನಾನು ತಾಯಿಯಲ್ಲ ನಾನು ಹೆಂಡತಿಯಲ್ಲ ನಾನು ಮಗಳಲ್ಲ ತೊಲಗಾಚೆ ಇನ್ನು ನಾ ನಿನ್ನ ಪೊರೆವವಳಲ್ಲ… ನಾನು ಮಮತಯಲ್ಲ ನಾನು ಸಹನೆಯಲ್ಲ ನಾನು ಶಾಂತಿಯಲ್ಲ ತೊಲಗಾಚೆ ಇನ್ನು ನಾ ನಿನ್ನ ನಂಬುವವಳಲ್ಲ… ಈ ನೆಲ ಈ ನದಿ ಈ ಹೂವು ಈ ಚಿಗುರು ಈ ಚಿಕ್ಕೆ ಈ ಚಂದ್ರ ನಿನ್ನಂತಹವನಿಗಲ್ಲ… […]

#ಕವಿತೆ

ಇಂದು ನಿನ್ನೆಯಂತಿಲ್ಲ

0
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು:ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)

ಗೆಳೆಯ ರಹೀಮನ ಮನೆಯಲ್ಲಿ ಕುಟ್ಟಿದ ಮೆಹಂದಿಗೆ ಹಪಾಹಪಿಸಿ ಕಾಡಿ ಬೇಡಿ ಇಸಿದುಕೊಳ್ಳುತ್ತಿದ್ದೆ. ಕೈಬಣ್ಣ ಕೆಂಪಗಾದಷ್ಟು ಗುಲಾಬಿ ಅರಳುತ್ತಿತ್ತು ಮನದಲ್ಲಿ. ಪತ್ರ ಹೊತ್ತು ತರುವ ಇಸೂಬಸಾಬ್ ಬಂದಾಗಲೆಲ್ಲಾ ಚಾ ಕುಡಿದೇ ಹೋಗುತ್ತಿದ್ದ.. ಅಂಗಳದ ತುಂಬೆಲ್ಲಾ ಅತ್ತರಿನ ಪರಿಮಳ ಬಿಟ್ಟು. ರಮಜಾನ್ ದಿನದ ಸಿರ್‍ಕುರಮಾ ಘಮಘಮಲು ನಮ್ಮನೆಯಲ್ಲೂ ತುಂಬಿಕೊಳ್ಳುತ್ತಿತ್ತು. ಬಂಡಿಹಬ್ಬದ ಬೆಂಡು ಬತ್ತಾಸು, ಕಜ್ಜಾಯಗಳೆಲ್ಲ ಅವರ ತಿಂಡಿಡಬ್ಬ ತುಂಬಿಕೊಳ್ಳುತ್ತಿತ್ತು. […]

#ಹನಿಗವನ

ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨

0
ಮೂಲತಃ ಹಾಸನದವರು. ಓದಿದ್ದು ಹಾಸನದ ಮಲೆನಾಡು ಎಂಜಿನಿಯರಂಗ್ ಕಾಲೇಜಿನಲ್ಲಿ ಬಿ.ಇ. ಹಾಗು ಎಂ.ಟೆಕ್. ಈಗ ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಕಾರ್‍ಯನಿರ್‍ವಹಣೆ. ‘ಮೊದಲ ತೊದಲು’, ‘ಬೆಳಕಿನ ಬೇಲಿ’, ‘ಗೋಡೆಗಳ ನಡುವೆ...’ ಮತ್ತು ‘ಕುಶಲೋಪರಿ’ ಪ್ರಕಟಿತ ಕೃತಿಗಳು.

ಕನಸಿನಂಗಡಿ ತುಂಬ ಚಿತ್ತಾರದ ಕನಸುಗಳು… ಅವಳದು ಖಾಲಿ ಜೇಬು *****

#ಅನುವಾದ

ಏಕಾಂತ

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ಏಕಾಂತವು ಮಳೆಯಂತೆ. ಸಂಜೆ ಹೊತ್ತಿನಲ್ಲಿ ಸಮುದ್ರದ ಕಡೆಯಿಂದ ನಮ್ಮ ಭೇಟಿಗೆ ಬರುವುದು. ದೂರ ತುಂಬ ದೂರದ ಬಯಲಲ್ಲಿ ಹಬೆಯಾಗಿ ಆಕಾಶಕ್ಕೇರುವುದು, ಏರುವುದು ತನ್ನ ಹಕ್ಕು ಅನ್ನುವಂತೆ. ಅಲ್ಲಿಂದ ಬಂದು ಊರಿನ ಮೇಲೆ ಸುರಿಯುವುದು. ಮಬ್ಬು ಕತ್ತಲ ವೇಳೆಯಲ್ಲಿ ಊರ ಬೀದಿಗಳೆಲ್ಲ ಮುಂಜಾವಿನತ್ತ ತಿರುಗಿರುವಾಗ, ಬಯಸಿದಾಸೆಗಳೆಲ್ಲ ತೀರಿಹೋಗಿ ಮೈಗಳೆಲ್ಲ ದುಃಖದಲ್ಲಿ ಒಂಟಿಯಾಗಿರುವಾಗ, ಒಬ್ಬರನ್ನೊಬ್ಬರು ದ್ವೇಷಿಸುವ ಮನುಷ್ಯರೆಲ್ಲ ಅದೇ […]

#ಕವಿತೆ

ಹರಿಚರಣ ರತನ

0
Latest posts by ಹಂಸಾ ಆರ್‍ (see all)

ಹರಿಚರಣ ರತನ ಮಾನಸ ಮೋಹನ ಮುರಳಿ ನಂದಲಾಲ ಯಶೋದಾ || ಮುರಳಿಗಾನ ಆನಂದ ಯಮುನಾ ತೀರ ಗೋಪಿ ರಾಧಾ ಮನ ವಿಹಾರಿ || ಮದನ ಮೋಹನ ಭಾಗವತ ಗಾವತ ವೇದ ಪುರಾಣ ವಿಹಾರಿ || ಸುರನರ ಪೂಜಿತ ಸೇವಕ ಜನಮನ ಬಾಲಗೋಪಾಲ ಗಿರಿಧಾರಿ || ವಾಸುದೇವಸುತ ಭಕ್ತಾಧಿಪತಿ ಪಾಂಡವ ದುಷ್ಟಶಿಕ್ಷಿತ ಧಾರಿ || ವಿಶ್ವರೂಪ ದರುಶನ […]

#ಕವಿತೆ

ಕವಿ ಹೇಳಿಕೊಂಡ ಕಥೆ

0
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು.ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಸೆಟೆದು ನಿಂತಿದ್ದಾನೆ ಹದಿನಾಲ್ಕು ಹರೆಯದ ಹುಡುಗ ಎರಗಲಿರುವ ಗರುಡ, ಬಾಣ ಖ್ಯಾತ ವಾತ್ಸ್ಯಾಯನರ ಋಷಿಕುಲದ ಹೆದೆಯೇರಿ ಜಿಗಿಯಲರ್ಹತೆಯಿದ್ದ ಜಾಣ. ಹೋಮಧೂಮದ ಗಾಳಿ ವೇದಘೋಷದ ಪಾಳಿ ಎಂದೂ ತಪ್ಪಿರದ ಮನೆ ಈಗ ಖಾಲಿ. ತಾಯಿ, ಎಳೆತನದಲ್ಲೇ ಗಾಳಿಗಾರಿದ ಬೆಳಕು, ತಂದೆ ಕೀರ್ತಿಗೆ ಸಂದ ಮೊನ್ನೆ ಕೈ ಹಿಡಿದ ಹೆಣ್ಣು ತವರಿನಲ್ಲೇ ಇರುವ ಪುಟ್ಟ ಸಸಿ ಇನ್ನೂ ಮನೆಯು […]