ದೂರು
ದೂರು ಯಾರಿಗೆ ಹೇಳುತ್ತೀಯೆ ಹೃದಯವೇ?
ನೀನು ನಡೆಯುವ ಯಾರೂ ಸುಳಿಯದ ಹಾದಿಯಲ್ಲಿ
ಅರ್ಥವಾಗದ ಮನುಷ್ಯ ಕುಲವನ್ನು ಆಗಾಗ ಅಡ್ಡ ಹಾಯುವೆ.
ಭವಿಷ್ಯಕ್ಕೆ ಗತಿ ಇರದ ಭವಿಷ್ಯಕ್ಕೆ, ಕಳೆದ ನಾಳೆಗೆ
ಸಾಗುವ ಮಾರ್ಗಕ್ಕೆ ವಶವಾದದ್ದು ಮತ್ತಷ್ಟು ವ್ಯರ್ಥ.
ಮೊದಲು ದೂರಿದ್ದೆಯಾ? ಏನದು? ಮಾಗದೆ
ನೆಲಕ್ಕೆ ಕಳಚಿ ಬಿದ್ದ ಸಂತೋಷದ ಹಣ್ಣು.
ಈಗ ನನ್ನ ಆನಂದದ ಮರವೇ ಮುರಿದು ಬೀಳುತ್ತಿದೆ.
ಕಾಣದ ಬಯಲಲ್ಲಿ ಸೊಂಪಾಗಿ ಬೆಳದದ್ದು.
ಅದೃಶ್ಯ ದೇವತೆಗಳ ಬಳಿಗೆ ಕರೆದದ್ದು,
ಸಾವಧಾನ ಬೆಳೆದ ಆನಂದ ವೃಕ್ಷವೇ
ಬಿರುಸು ಬೀಸುವ ಗಾಳಿಗೆ ಬೀಳುತ್ತಿದೆ.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke