ಗತಿ

ಹೋಮ ಮಾಡಿದರು ಹವಿಸ್ಸು ಅರ್‍ಪಿಸಿದರು ಬೆಣ್ಣೆ ತುಪ್ಪ ಸುರಿದರು ಅಗ್ನಿಗೆ ಸಂತೈಸಿದರು ಅಡ್ಡಬಿದ್ದು ಆರಾಧಿಸಿದರು ಹೊರಗೆ ಬಂದರು ಸಿಗರೇಟು ಹಚ್ಚಿ ಸೇದಿದರು ಕೊನೆಗೆ ಉಳಿದ ಅಗ್ನಿಯ ಚೂರನ್ನು ಪಾಪ ಕಾಲಲ್ಲಿ ತುಳಿದು ಹೊಸಕಿದರು *****

ಭೂಮಿಗಿಂತ ಹೃದಯ ಭಾರ

ಭೂಮಿಗಿಂತ ಹೃದಯ ಭಾರ ಕಾಡಿಗಿಂತ ಹಾಡು ಘೋರ ಏಕೆ ತಿಳಿಯದಾಗಿದೆ? ಬೆಳದಿಂಗಳು ಸುಡುತಲಿಹುದು ನೈದಿಲೆ ಹೂ ಬಾಡುತಿಹುದು ಯಾರು ತಿಳಿಸಬೇಕಿದೆ? ಘಮಘಮಿಸುವ ಮಲ್ಲೆ ತೋಟ ಕಂಪಿನುಸಿರ ಬಿಸಿಯ ಸೂಸಿ ಏಕೆ ವಿವಶವಾಗಿದೆ? ಬೀಸಿ ಬಂದ...
ಕರಾಮತ್ತು

ಕರಾಮತ್ತು

ಮೇಟಗಳ್ಳಿ ಬಸ್ ನಿಲುಗಡೆಯಲ್ಲಿ ನಿಂತ ನಗರ ಸಾರಿಗೆ ವಾಹನವನ್ನು ಏರಿದೆ. ಜನದಟ್ಟಣೆ ಇರದೆ ಪೀಠಗಳು ಬಿಕೋ ಎನ್ನುತ್ತಿದ್ದವು. ಊರಿಗೆ ಪ್ರಯಾಣಿಸಲು ಜಾಗ ಕಾಯ್ದಿರಿಸಲೋಸುಗ ಕೇಂದ್ರ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಚೀಟಿ ಪಡೆದು ಮೂರು ಪೀಠಗಳ ಆಸನದಲ್ಲಿ...

ಪ್ರಭುದೃಷ್ಟಿ ಹರಿದು ಗಿರಿತುದಿಗೆ ಹೆಮ್ಮೆಯನೆರೆದು

ಪ್ರಭುದೃಷ್ಟಿ ಹರಿದು ಗಿರಿತುದಿಗೆ ಹೆಮ್ಮೆಯನೆರೆದು, ಹೊನ್ನ ತುಟಿಯೊತ್ತಿ ಹಸಿರೆದೆಗೆ ಮುತ್ತನು ಸುರಿದು, ಮಂಕುತೊರೆಮೈಗೆ ಬಂಗಾರ ರಸವನು ಬಳಿದು, ಹೊಳೆವ ಬೆಳಗಿನ ಚೆಲುವ ನೋಡಿರುವೆ ಮೈಮರೆದು. ಥಟ್ಟನೇಳುವುವು ಕೆಳಗಲೆವ ಕಾರ್ಮೋಡಗಳು ದಿವ್ಯಮುಖ ಮರೆಸಿ ಕರಿತೆರೆಯಾಗಿ ತೇಲುವುವು,...

ನಾವು ದೇವರಲ್ಲ

ನಾನು ರಾಜ್ಯವನ್ನಾಳಿದೆ, ರಾಜನಾಗಿ ಮೆರೆದೆ ಜನತೆಯ ಹಿತಕೆ ನನ್ನಯ ತನಕ್ಕೆ ನಾನು ದಾರ್ಶನಿಕನಾಗಿ ಜಗದಲಿ ಬೆಳೆದೆ ಜನರ ದಾರಿದ್ರ್ಯವ ಕಳೆಯಲು ಯತ್ನಿಸಿದೆ ನಾನು ಸಾಧೂ ಸಂತನಾಗಿ ಭೂಮಿಯಲ್ಲಿ ನಿಂತೆ ಸಮಾಜಕ್ಕೆಲ್ಲ ಸಾಂತ್ವನ ಹೇಳಿದೆ ನಾನು...

ಸಂಭ್ರಮ

ಸುಂದರ ಸಂಜೆ ಸಂತಸದ ತಂಗಾಳಿ ಸೊಗಸಾದ ಆಗಸ ಗಗನದ ತುಂಬಮುಗಿಲುಗಳು ಸಣ್ಣವು ದೊಡ್ಡವು ಬಿಳಿಯವು ಕರಿಯವು ಬಾನಿನ ಹಾಲ್ಗಡದಲ್ಲಿ ತೇಲುವ ಬೆಣ್ಣೆಗಳು ಅಂತರಿಕ್ಷದ ಅರಮನೆಯಲ್ಲಿ ಭಾರಿ ಔತಣಕೂಟ ಮೋಡಗಳ ಓಡಾಟ, ಮಿಂಚಿನ ದೀಪಾಲಂಕಾರ ಗುಡುಗಿನ...