ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ
'ಸಂಚಯ' ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.
ಸಾಹಿತ್ಯ
ಸಂಶೋಧನೆ
ಅಧ್ಯಯನ
ಸಮುದಾಯ
ನಮ್ಮ ಯೋಜನೆಗಳು
ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆಯ ಕನ್ನಡ ಪುಸ್ತಕಗಳು/ದಾಖಲೆಗಳು
ಬ್ರಿಟಿಷ್ ಲೈಬ್ರರಿ ಅಳಿವಿನಂಚಿನಲ್ಲಿನ ದಾಖಲೆಗಳ ಯೋಜನೆ (https://eap.bl.uk/search/site/kannada) ಕನ್ನಡಕ್ಕೆ ಸಂಬಂಧಿಸಿದ ೧೯೬೧ ಪುಸ್ತಕಗಳು/ದಾಖಲೆಗಳು ಲಭ್ಯವಿವೆ. ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಭಾಷಾ ಭಾರತಿ, ಕನ್ಯಾವಿತಂತು, ಉತ್ಪಲಕುಮಾರಿ, ಮುದ್ರಾಮಂಜೂಷ, ಮಿತ್ರವಿಂದ ಗೋವಿಂದ, ರೇಖಾಗಣಿತ...
ಪುಸ್ತಕ ಸಂಚಯದಲ್ಲೀಗ ಕಣಜ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನೂ ಹುಡುಕಿ
ಪುಸ್ತಕ ಸಂಚಯದಲ್ಲೀಗ ಕಣಜ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನೂ ಹುಡುಕಿ
Conserving Linguistic Heritage the FOSS way
Presentation on our work around http://vachana.sanchaya.net to digitize and build linguistic research tool for Kannada. Presented by Omshivaprakash H.L at Swatantra 2014 - Fifth International Free Software Conference, Kerala on 19th December 2014. Event Page:...