ಎಲ್ಲಿ ಕಾರ್ಮುಗಿಲಿರುವುದೋ

ಎಲ್ಲಿ ಕಾರ್ಮುಗಿಲಿರುವುದೋ
ಅಲ್ಲಿ ಹಗಲಿನ ನೆರಳು ||

ಎಲ್ಲಿ ಮನಗಳು ಹರಿವುದೋ
ಅಲ್ಲಿ ತಿಳಿವಿನ ಅಲೆಗಳು ||

ಎಲ್ಲಿ ಚಂದಿರನ ಬೆಳದಿಂಗಳೋ
ಅಲ್ಲಿ ಬೆಳಕಿನ ಹೊನಲು ||

ಎಲ್ಲಿ ತಾಯಿ ಕುಡಿಯ ಬೇರೋ
ಅಲ್ಲಿ ಮಮತೆಯ ಸಸಿಗಳು ||

ಎಲ್ಲಿ ಬಂಜೆತನದ ಬಾಳಿಹುದೋ
ಅಲ್ಲಿ ಆಶಾದಾಯಕ ಹೂಗಳು ||

ಎಲ್ಲಿ ಹಸಿವಿನ ಅಳಲಿಹುವುದೋ
ಅಲ್ಲಿ ಹಸಿರಿನ ಸೆರಗು ||

ಎಲ್ಲಿ ಸಿರಿತನವಿರುವುದೋ
ಅಲ್ಲಿ ಚಂಚಲ ನರ್ತನವೂ ||

ಎಲ್ಲಿಂದೆಲ್ಲಿಗೋ ಪಯಣ
ಸರಸ ವಿರಸ ಜೀವನ
ಮೂರು ದಿನದ ಹಾಡು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂರನೇ ಮದಿವಿ ಮಹಾಸಂಕಟ
Next post ಶಂತನು ಮರಳಿ ಬಂದಾಗ

ಸಣ್ಣ ಕತೆ

  • ಹಳ್ಳಿ…

    -

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… ಮುಂದೆ ಓದಿ.. 

  • ಗಿಣಿಯ ಸಾಕ್ಷಿ…

    -

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… ಮುಂದೆ ಓದಿ.. 

  • ಮೌನರಾಗ

    -

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… ಮುಂದೆ ಓದಿ.. 

  • ಯಾರು ಹೊಣೆ?

    -

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… ಮುಂದೆ ಓದಿ.. 

  • ನಿರೀಕ್ಷೆ

    -

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… ಮುಂದೆ ಓದಿ..