Facebook ಕಂಪನಿಯು ಈಗ Meta ಆಗಿದೆ. ನಾವು ಜನವರಿ 4, 2022 ರಂದು ಹೊಸ ಹೆಸರನ್ನು ಪ್ರತಿಬಿಂಬಿಸಲು ನಮ್ಮ ಬಳಕೆಯ ನಿಯಮಗಳು, ಡೇಟಾ ನೀತಿ ಮತ್ತು ಕುಕೀಸ್ ನೀತಿಯನ್ನು ನವೀಕರಿಸಿದ್ದೇವೆ. ನಮ್ಮ ಕಂಪನಿಯ ಹೆಸರು ಬದಲಾಗಿದ್ದರೂ, ನಾವು Meta ದಿಂದ Facebook ಅಪ್ಲಿಕೇಶನ್ ಸೇರಿದಂತೆ ಅದೇ ಉತ್ಪನ್ನಗಳನ್ನು ನೀಡುವುದನ್ನು ಮುಂದುವರಿಸುತ್ತಿದ್ದೇವೆ. ನಮ್ಮ ಡೇಟಾ ನೀತಿ ಮತ್ತು ಸೇವಾ ನಿಯಮಗಳು ಜಾರಿಯಲ್ಲಿರುತ್ತವೆ ಮತ್ತು ಈ ಹೆಸರಿನ ಬದಲಾವಣೆಯು ನಾವು ಡೇಟಾವನ್ನು ಹೇಗೆ ಬಳಸುತ್ತೇವೆ ಅಥವಾ ಹಂಚಿಕೊಳ್ಳುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುವುದಿಲ್ಲ. Meta ಮತ್ತು ಮೆಟಾವರ್ಸ್‌ಗಾಗಿ ನಮ್ಮ ದೃಷ್ಟಿಕೋನದ ಕುರಿತು ಇನ್ನಷ್ಟು ತಿಳಿಯಿರಿ.



ಕುಕೀಸ್ ಮತ್ತು ಇತರ ಸಂಗ್ರಹಣೆ ತಂತ್ರಜ್ಞಾನಗಳು

ಕುಕೀಸ್ ವೆಬ್ ಬ್ರೌಸರ್‌ಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಬಳಸುವ ಸಣ್ಣ ಪಠ್ಯಗಳಾಗಿವೆ. ಕಂಪ್ಯೂಟರ್‌ಗಳು, ಫೋನ್‌ಗಳು ಮತ್ತು ಇತರ ಸಾಧನಗಳಲ್ಲಿ ಗುರುತಿಸುವಿಕೆಗಳು ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಸ್ವೀಕರಿಸಲು ಕುಕೀಸ್ ಬಳಸಲಾಗುತ್ತದೆ. ನಿಮ್ಮ ವೆಬ್ ಬ್ರೌಸರ್ ಅಥವಾ ಸಾಧನದಲ್ಲಿ ನಾವು ಸಂಗ್ರಹಿಸುವ ಡೇಟಾ, ನಿಮ್ಮ ಸಾಧನದ ಜೊತೆಗೆ ಸಂಯೋಜಿತವಾಗಿರುವ ಗುರುತಿಸುವಿಕೆಗಳು ಮತ್ತು ಇತರ ಸಾಫ್ಟ್‌ವೇರ್ ಒಳಗೊಂಡಂತೆ ಇತರ ತಂತ್ರಜ್ಞಾನಗಳನ್ನು ಇಂತಹುದೇ ಉದ್ದೇಶಗಳಿಗೆ ಬಳಸಲಾಗುತ್ತದೆ. ಈ ನೀತಿಯಲ್ಲಿ, ನಾವು ಈ ಎಲ್ಲಾ ತಂತ್ರಜ್ಞಾನಗಳನ್ನು “ಕುಕೀಸ್” ಎಂಬುದಾಗಿ ಉಲ್ಲೇಖಿಸುತ್ತೇವೆ.

ನೀವು Facebook ಖಾತೆಯನ್ನು ಹೊಂದಿದ್ದರೆ, ನಮ್ಮ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ Meta ಉತ್ಪನ್ನಗಳನ್ನು ಬಳಸಿದರೆ ಅಥವಾ Meta ಉತ್ಪನ್ನಗಳನ್ನು (ಇಷ್ಟ ಬಟನ್ ಒಳಗೊಂಡಂತೆ) ಬಳಸುವ ಇತರ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಗೆ ಭೇಟಿ ನೀಡಿದರೆ ನಾವು ಕುಕೀಸ್ ಬಳಸುತ್ತೇವೆ. ನಿಮಗೆ Meta ಉತ್ಪನ್ನಗಳನ್ನು ನೀಡಲು ಮತ್ತು ನೀವು ನೋಂದಾಯಿಸಿದ್ದರೂ ಅಥವಾ ಇಲ್ಲದಿದ್ದರೂ ಅಥವಾ ಲಾಗ್ ಇನ್ ಮಾಡಿದ್ದರೂ ಅಥವಾ ಮಾಡಿಲ್ಲದೇ ಇದ್ದರೂ ಇತರ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌‌ಗಳ ನಿಮ್ಮ ಬಳಕೆಯ ಕುರಿತಾದ ಮಾಹಿತಿಯನ್ನು ಒಳಗೊಂಡಂತೆ ನಿಮ್ಮ ಕುರಿತಾಗಿ ನಾವು ಸ್ವೀಕರಿಸುವ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು Meta ಅನ್ನು ಕುಕೀಸ್ ಸಕ್ರಿಯಗೊಳಿಸುತ್ತದೆ.

ಈ ನೀತಿಯು ನಾವು ಕುಕೀಸ್ ಹೇಗೆ ಬಳಸುತ್ತೇವೆ ಮತ್ತು ನೀವು ಹೊಂದಿರುವ ಆಯ್ಕೆಗಳನ್ನು ವಿವರಿಸುತ್ತದೆ. ಈ ನೀತಿಯಲ್ಲಿ ಬೇರೆ ರೀತಿಯಲ್ಲಿ ತಿಳಿಸಿರುವುದನ್ನು ಹೊರತುಪಡಿಸಿ, ಡೇಟಾ ನೀತಿಯು ನಾವು ಕುಕೀಸ್ ಮೂಲಕ ಸಂಗ್ರಹಿಸುವ ಡೇಟಾದ ನಮ್ಮ ಪ್ರಕ್ರಿಯೆಗೊಳಿಸುವಿಕೆಗೆ ಅನ್ವಯಿಸುತ್ತದೆ.

ನಾವು ಕುಕೀಸ್ ಅನ್ನು ಏಕೆ ಬಳಸುತ್ತೇವೆ?

ವಿಷಯವನ್ನು ವೈಯಕ್ತೀಕರಿಸುವ ಮೂಲಕ, ಜಾಹೀರಾತುಗಳನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಸಿದ್ಧಪಡಿಸುವ ಮತ್ತು ಅಳತೆ ಮಾಡುವ ಮೂಲಕ ಮತ್ತು ಸುರಕ್ಷಿತ ಅನುಭವವನ್ನು ನೀಡುವಂತಹ ರೀತಿಯಲ್ಲಿ Meta ಉತ್ಪನ್ನಗಳನ್ನು ಒದಗಿಸಲು, ರಕ್ಷಿಸಲು ಮತ್ತು ಸುಧಾರಿಸಲು ಕುಕೀಸ್ ನಮಗೆ ಸಹಾಯ ಮಾಡುತ್ತದೆ. ನಾವು ಬಳಸುವ ಕುಕೀಸ್ ನಿಮ್ಮ ಬ್ರೌಸರ್ ಅನ್ನು ಮುಚ್ಚಿದಾಗ ಅಳಿಸುವಂತಹ ಸೆಷನ್ ಕುಕೀಸ್ ಮತ್ತು ಅವಧಿ ಮುಗಿಯುವವರೆಗೆ ಅಥವಾ ನೀವು ಅಳಿಸುವವರೆಗೆ ನಿಮ್ಮ ಬ್ರೌಸರ್‌ನಲ್ಲಿ ಉಳಿಯುವಂತಹ ನಿರಂತರ ಕುಕೀಸ್ ಅನ್ನು ಒಳಗೊಂಡಿವೆ. ನಾವು Meta ಉತ್ಪನ್ನಗಳನ್ನು ಸುಧಾರಿಸುವಾಗ ಮತ್ತು ನವೀಕರಿಸುವಾಗ ಕಾಲಕಾಲಕ್ಕೆ ನಾವು ಬಳಸುವ ಕುಕೀಸ್ ಬದಲಾಗಬಹುದು, ಆದರೆ ನಾವು ಅವುಗಳನ್ನು ಈ ಕೆಳಗಿನ ಉದ್ದೇಶಗಳಿಗಾಗಿ ಬಳಸುತ್ತೇವೆ:
ದೃಢೀಕರಣ
ನಿಮ್ಮ ಖಾತೆಯನ್ನು ಪರಿಶೀಲಿಸಲು ಮತ್ತು ನೀವು ಯಾವಾಗ ಲಾಗ್ ಇನ್ ಮಾಡಿರುವಿರಿ ಎಂಬುದನ್ನು ನಿರ್ಧರಿಸಲು ಕುಕೀಸ್ ಅನ್ನು ನಾವು ಬಳಸುತ್ತೇವೆ, ಇದರಿಂದ Meta ಉತ್ಪನ್ನಗಳನ್ನು ಪಡೆಯಲು (ನಿಮಗೆ ನಾವು ಸುಲಭಗೊಳಿಸಬಹುದು ಮತ್ತು ಸೂಕ್ತ ಅನುಭವ ಮತ್ತು ವೈಶಿಷ್ಟ್ಯಗಳನ್ನು ತೋರಿಸಬಹುದು.
ಉದಾಹರಣೆಗೆ: ನೀವು ಒ೦ದು  Facebook   ಪುಟದಿ೦ದ ಇನ್ನೊ೦ದು ಪುಟಕ್ಕೆ ಚಲಿಸಿದಾಗ ನಿಮ್ಮನ್ನು ಲಾಗ್ ಇನ್ ಆಗಿ ಇಡಲು ನಾವು ಕುಕೀಸ್ ಬಳಸುತ್ತೇವೆ. ಕುಕೀಸ್ ನಿಮ್ಮ ಬ್ರೌಸರ್ ಅನ್ನು ನೆನಪಿಟ್ಟುಕೊಳ್ಳಲು ಸಹ ನಮಗೆ ಸಹಾಯ ಮಾಡುತ್ತವೆ. ಇದರಿಂದ ನೀವು Facebook ಗೆ ಮತ್ತೆ ಲಾಗ್ ಇನ್ ಮಾಡಲು ಪ್ರಯತ್ನಿಸುತ್ತಿರಬೇಕಾಗಿಲ್ಲ ಮತ್ತು ನೀವು ಮೂರನೇ-ವ್ಯಕ್ತಿಯ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ಮೂಲಕ Facebook ಗೆ ಹೆಚ್ಚು ಸುಲಭವಾಗಿ ಲಾಗ್ ಇನ್ ಮಾಡಬಹುದು. ಉದಾಹರಣೆಗೆ, ಈ ಉದ್ದೇಶಕ್ಕಾಗಿ ನಾವು 365 ದಿನಗಳ ಜೀವಿತಾವಧಿಯೊಂದಿಗೆ ‘c_user’ ಮತ್ತು ‘xs’ ಕುಕೀಸ್ ಬಳಸುತ್ತೇವೆ.
ಭದ್ರತೆ, ಸೈಟ್ ಮತ್ತು ಉತ್ಪನ್ನ ಸಮಗ್ರತೆ
ನಿಮ್ಮ ಖಾತೆ, ಡೇಟಾ ಮತ್ತು Meta ಉತ್ಪನ್ನಗಳನ್ನು ಭದ್ರವಾಗಿ ಮತ್ತು ಸುರಕ್ಷಿತವಾಗಿಡಲು ನಮಗೆ ಸಹಾಯ ಮಾಡಲು ನಾವು ಕುಕೀಸ್ ಬಳಸುತ್ತೇವೆ.
ಉದಾಹರಣೆಗೆ: ಉದಾಹರಣೆಗೆ, ತ್ವರಿತವಾಗಿ ವಿಭಿನ್ನ ಪಾಸ್‌ವರ್ಡ್‌ಗಳನ್ನು ಊಹಿಸುವ ಮೂಲಕ ಯಾರಾದರೂ ದೃಢೀಕರಣವಿಲ್ಲದೆಯೇ Facebook ಖಾತೆಯನ್ನು ಪ್ರವೇಶಿಸಲು ಪ್ರಯತ್ನಿಸಬಹುದಾದ ಸಂದರ್ಭದಲ್ಲಿ ಕುಕೀಸ್ ನಮಗೆ ಹೆಚ್ಚುವರಿ ಭದ್ರತೆ ಕ್ರಮಗಳನ್ನು ಗುರುತಿಸಲು ಮತ್ತು ಜಾರಿಗೊಳಿಸಲು ಸಹಾಯ ಮಾಡಬಹುದು. ನಿಮ್ಮ ಪಾಸ್‌ವರ್ಡ್ ಅನ್ನು ನೀವು ಮರೆತ ಸಂದರ್ಭದಲ್ಲಿ ನಿಮ್ಮ ಖಾತೆಯನ್ನು ಮರುಪಡೆಯಲು ಅಥವಾ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ನಮಗೆ ಹೇಳಿದರೆ ಹೆಚ್ಚುವರಿ ಪ್ರಮಾಣೀಕರಣಕ್ಕೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ನಾವು ಕುಕೀಸ್ ಬಳಸುತ್ತೇವೆ. ಇದು ನಿಮ್ಮ ಬ್ರೌಸರ್ ಅನ್ನು ಸುರಕ್ಷಿತವಾಗಿ ಗುರುತಿಸಲು ನಮಗೆ ಸಕ್ರಿಯವಾಗಿರುವಂತಹ ನಮ್ಮ ‘sb’ ಮತ್ತು ‘dbln’ ಕುಕೀಸ್ ಒಳಗೊಂಡಿದೆ.
ನಮ್ಮ ನೀತಿಗಳನ್ನು ಉಲ್ಲಂಘಿಸುವ ಅಥವಾ Meta ಉತ್ಪನ್ನಗಳನ್ನು ಒದಗಿಸುವ ನಮ್ಮ ಸಾಮರ್ಥ್ಯವನ್ನು ಕುಗ್ಗಿಸುವ ಚಟುವಟಿಕೆಯನ್ನು ಎದುರಿಸಲು ಸಹ ನಾವು ಕುಕೀಸ್ ಬಳಸುತ್ತೇವೆ.
ಉದಾಹರಣೆಗೆ: ಹೆಚ್ಚಿನ ಸಂಖ್ಯೆಯ ನಕಲಿ Facebook ಖಾತೆಗಳನ್ನು ರಚಿಸಲು ಬಳಸುವ ಕಂಪ್ಯೂಟರ್‌ಗಳನ್ನು ಗುರುತಿಸಲು ನಮಗೆ ಅನುವು ಮಾಡಿಕೊಡುವ ಮೂಲಕ ಸ್ಪ್ಯಾಮ್ ಮತ್ತು ಫಿಶಿಂಗ್ ದಾಳಿಯ ವಿರುದ್ಧ ಹೋರಾಡಲು ಕುಕೀಸ್ ನಮಗೆ ಸಹಾಯ ಮಾಡುತ್ತದೆ. ಮಾಲ್‌ವೇರ್‌ ಸೋಂಕಿಗೆ ಒಳಗಾಗಿರುವ ಕಂಪ್ಯೂಟರ್‌ಗಳನ್ನು ಪತ್ತೆಹಚ್ಚಲು ಮತ್ತು ಅವುಗಳು ಹೆಚ್ಚಿನ ಹಾನಿಯನ್ನು ಉಂಟುಮಾಡದಂತೆ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ಸಹ ನಾವು ಕುಕೀಸ್ ಬಳಸುತ್ತೇವೆ. ನಮ್ಮ ‘csrf’ ಕುಕೀ, ಉದಾಹರಣೆಗೆ, ಕ್ರಾಸ್-ಸೈಟ್ ವಿನಂತಿಯ ಖೋಟಾ ದಾಳಿಗಳನ್ನು ತಡೆಯಲು ನಮಗೆ ಸಹಾಯ ಮಾಡುತ್ತದೆ. Facebook ಖಾತೆಗಳಿಗೆ ಪ್ರಬುದ್ಧ ವಯಸ್ಸಿನವರಿಗಿಂತ ಕಡಿಮೆ ವಯಸ್ಸಿನ ಜನರು ನೋಂದಣಿ ಮಾಡಿಕೊಳ್ಳದಂತೆ ತಡೆಗಟ್ಟಲು ಸಹ ನಮಗೆ ಕುಕೀಸ್ ಸಹಾಯ ಮಾಡುತ್ತವೆ.
ಜಾಹೀರಾತು, ಶಿಫಾರಸುಗಳು, ಒಳನೋಟಗಳು ಮತ್ತು ಮಾಪನ
ಜಾಹೀರಾತುಗಳನ್ನು ತೋರಿಸಲು ಮತ್ತು ವ್ಯವಹಾರಗಳು ಮತ್ತು ಇತರ ಸಂಸ್ಥೆಗಳ ಬಗ್ಗೆ ಅವರು ಪ್ರಚಾರ ಮಾಡುವ ಉತ್ಪನ್ನಗಳು, ಸೇವೆಗಳು ಅಥವಾ ಯಾವುದಾದರು ನಿರ್ದಿಷ್ಟ ಗುರಿ/ಉದ್ದೇಶಗಳಲ್ಲಿ ಆಸಕ್ತಿ ಹೊಂದಿರುವ ಜನರಿಗೆ ಶಿಫಾರಸುಗಳನ್ನು ಮಾಡಲು ನಾವು ಕುಕೀಸ್ ಬಳಸುತ್ತೇವೆ.
ಉದಾಹರಣೆಗೆ: ಈ ಹಿಂದೆ ವ್ಯವಹಾರದ ವೆಬ್‌ಸೈಟ್‌ಗೆ ಭೇಟಿ ನೀಡಿದ, ಅದರ ಉತ್ಪನ್ನಗಳನ್ನು ಖರೀದಿಸಿದ ಅಥವಾ ಅದರ ಅಪ್ಲಿಕೇಶನ್‌ಗಳನ್ನು ಬಳಸಿದ ಜನರಿಗೆ ಜಾಹೀರಾತುಗಳನ್ನು ನೀಡಲು ಸಹಾಯ ಮಾಡಲು ಮತ್ತು ಆ ಚಟುವಟಿಕೆಯನ್ನು ಆಧರಿಸಿ ಉತ್ಪನ್ನಗಳು ಮತ್ತು ಸೇವೆಗಳನ್ನು ಶಿಫಾರಸು ಮಾಡಲು ನಮಗೆ ಕುಕೀಸ್ ಅನುಮತಿಸುತ್ತದೆ. ನೀವು ಜಾಹೀರಾತನ್ನು ಎಷ್ಟು ಬಾರಿ ನೋಡುತ್ತೀರಿ ಎಂಬುದನ್ನು ಮಿತಿಗೊಳಿಸಲು ಸಹ ಕುಕೀಸ್ ನಮಗೆ ಅನುಮತಿಸುತ್ತದೆ ಇದರಿಂದ ಒಂದೇ ಜಾಹೀರಾತನ್ನು ಮತ್ತೆ ಮತ್ತೆ ನೀವು ನೋಡುವುದಿಲ್ಲ. ಉದಾಹರಣೆಗೆ, 90 ದಿನಗಳ ಜೀವಿತಾವಧಿಯೊಂದಿಗೆ ಜಾಹೀರಾತುಗಳ ಪ್ರಸ್ತುತತೆಯನ್ನು ತಲುಪಿಸಲು, ಅಳೆಯಲು ಮತ್ತು ಸುಧಾರಿಸಲು ‘fr’ ಕುಕಿಯನ್ನು ಬಳಸಲಾಗುತ್ತದೆ.
Meta ಉತ್ಪನ್ನಗಳನ್ನು ಬಳಸುವ ವ್ಯವಹಾರಗಳಿಗಾಗಿ ಜಾಹೀರಾತು ಪ್ರಚಾರಗಳ ಕಾರ್ಯನಿರ್ವಹಣೆಯನ್ನು ಮಾಪನ ಮಾಡಲು ಸಹ ನಾವು ಕುಕೀಸ್ ಬಳಸುತ್ತೇವೆ.
ಉದಾಹರಣೆಗೆ: ಜಾಹೀರಾತನ್ನು ಎಷ್ಟು ಬಾರಿ ತೋರಿಸಲಾಗಿದೆ ಎಂಬುದನ್ನು ಎಣಿಸಲು ಮತ್ತು ಆ ಜಾಹೀರಾತುಗಳ ವೆಚ್ಚವನ್ನು ಲೆಕ್ಕಹಾಕಲು ನಾವು ಕುಕೀಸ್ ಬಳಸುತ್ತೇವೆ. ಜಾಹೀರಾತು ಅನಿಸಿಕೆಗಳನ್ನು ಅನುಸರಿಸಿ ಜನರು ಎಷ್ಟು ಬಾರಿ ಖರೀದಿ ಮಾಡುತ್ತಾರೆ ಎಂಬುದನ್ನು ಅಳೆಯಲು ಸಹ ನಾವು ಕುಕೀಸ್ ಬಳಸುತ್ತೇವೆ. ಉದಾಹರಣೆಗೆ, ಜಾಹೀರಾತು ಮತ್ತು ಸೈಟ್ ವಿಶ್ಲೇಷಣಾ ಸೇವೆಗಳನ್ನು ಒದಗಿಸುವ ಉದ್ದೇಶಗಳಿಗಾಗಿ "_fbp" ಕುಕೀ ಬ್ರೌಸರ್‌ಗಳನ್ನು ಗುರುತಿಸುತ್ತದೆ ಮತ್ತು 90 ದಿನಗಳ ಜೀವಿತಾವಧಿಯನ್ನು ಹೊಂದಿರುತ್ತದೆ.
ಒಬ್ಬ ವ್ಯಕ್ತಿ ಬಳಸುವ ವಿಭಿನ್ನ ಬ್ರೌಸರ್‌ಗಳು ಮತ್ತು ಸಾಧನಗಳಲ್ಲಿ ಜಾಹೀರಾತುಗಳನ್ನು ಒದಗಿಸಲು ಮತ್ತು ಅಳೆಯಲು ಕುಕೀಸ್ ನಮಗೆ ಸಹಾಯ ಮಾಡುತ್ತದೆ.
ಉದಾಹರಣೆಗೆ: ನೀವು ಬಳಸುವ ವಿಭಿನ್ನ ಸಾಧನಗಳಲ್ಲಿ ಒಂದೇ ಜಾಹೀರಾತನ್ನು ಮತ್ತೆ ಮತ್ತೆ ವೀಕ್ಷಿಸುವುದನ್ನು ತಡೆಯಲು ನಾವು ಕುಕೀಸ್ ಬಳಸಬಹುದು.
Meta ಉತ್ಪನ್ನಗಳನ್ನು ಬಳಸುವ ಜನರು, ಜೊತೆಗೆ ಜಾಹೀರಾತುಗಳು, ವೆಬ್‌ಸೈಟ್‌ಗಳು ಮತ್ತು Meta ಉತ್ಪನ್ನಗಳನ್ನು ಬಳಸುವ ಜಾಹೀರಾತುದಾರರು ಮತ್ತು ವ್ಯವಹಾರಗಳ ಅಪ್ಲಿಕೇಶನ್‌ಗಳ ಜೊತೆಗೆ ಸಂವಹನ ಮಾಡುವ ಜನರ ಬಗ್ಗೆ ಒಳನೋಟಗಳನ್ನು ಒದಗಿಸಲು ಸಹ ಕುಕೀಸ್ ನಮಗೆ ಅನುಮತಿಸುತ್ತದೆ.
ಉದಾಹರಣೆಗೆ: ತಮ್ಮ Facebook ಪುಟವನ್ನು ಇಷ್ಟಪಡುವ ಅಥವಾ ತಮ್ಮ ಅಪ್ಲಿಕೇಶನ್‌ಗಳನ್ನು ಬಳಸುವ ಜನರ ಪ್ರಕಾರಗಳನ್ನು ಅರ್ಥಮಾಡಿಕೊಳ್ಳಲು ವ್ಯವಹಾರಗಳಿಗೆ ಸಹಾಯ ಮಾಡುವುದಕ್ಕಾಗಿ ಕುಕೀಸ್ ಅನ್ನು ನಾವು ಬಳಸುತ್ತೇವೆ, ಇದರಿಂದ ಅವುಗಳು ಹೆಚ್ಚು ಸಂಬಂಧಿತ ವಿಷಯವನ್ನು ಒದಗಿಸಬಹುದು ಮತ್ತು ತಮ್ಮ ಗ್ರಾಹಕರಿಗೆ ಆಸಕ್ತಿಕರವಾಗುವ ಸಾಧ್ಯತೆಯಿರುವ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸಬಹುದು.
ಮೂರನೇ ವ್ಯಕ್ತಿಯ ವೆಬ್‌ಸೈಟ್‌ಗಳಲ್ಲಿನ ನಿಮ್ಮ ಚಟುವಟಿಕೆಯ ಆಧಾರದ ಮೇಲೆ Meta ದಿಂದ ಜಾಹೀರಾತುಗಳನ್ನು ವೀಕ್ಷಿಸುವುದನ್ನು ತ್ಯಜಿಸಲು ನಿಮಗೆ ಸಹಾಯ ಮಾಡಲು ನಾವು ಐದು ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ನಮ್ಮ ‘oo’ ಕುಕಿಯಂತೆ ಕುಕೀಸ್ ಸಹ ಬಳಸುತ್ತೇವೆ. ನಾವು ಸ್ವೀಕರಿಸುವ ಮಾಹಿತಿ, Meta ಉತ್ಪನ್ನಗಳಲ್ಲಿ ಮತ್ತು ಹೊರಗೆ ಯಾವ ಜಾಹೀರಾತುಗಳನ್ನು ನಿಮಗೆ ತೋರಿಸಬೇಕು ಎಂಬುದನ್ನು ನಾವು ಹೇಗೆ ನಿರ್ಧರಿಸುತ್ತೇವೆ ಎಂಬುದರ ಬಗ್ಗೆ ಮತ್ತು ನಿಮಗೆ ಲಭ್ಯವಿರುವ ನಿಯಂತ್ರಣಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ಸೈಟ್ ವೈಶಿಷ್ಟ್ಯಗಳು ಮತ್ತು ಸೇವೆಗಳು
Meta ಉತ್ಪನ್ನಗಳನ್ನು ಒದಗಿಸಲು ನಮಗೆ ಸಹಾಯ ಮಾಡುವ ಕಾರ್ಯಕ್ಷಮತೆಯನ್ನು ಸಕ್ರಿಯಗೊಳಿಸಲು ಕುಕೀಸ್ ಅನ್ನು ನಾವು ಬಳಸುತ್ತೇವೆ.
ಉದಾಹರಣೆಗೆ: ಆದ್ಯತೆಗಳನ್ನು ಸಂಗ್ರಹಿಸಲು, ನೀವು Meta ಉತ್ಪನ್ನಗಳ ವಿಷಯವನ್ನು ಯಾವಾಗ ನೋಡಿದ್ದೀರಿ ಅಥವಾ ಸಂವಹನ ನಡೆಸಿದ್ದೀರಿ ಎಂದು ತಿಳಿಯಲು ಮತ್ತು ಕಸ್ಟಮೈಸ್ ಮಾಡಿದ ವಿಷಯ ಮತ್ತು ಅನುಭವಗಳನ್ನು ನಿಮಗೆ ಒದಗಿಸಲು ಕುಕೀಸ್ ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ನಿಮಗೆ ಮತ್ತು ಇತರರಿಗೆ ಸಲಹೆಗಳನ್ನು ನೀಡಲು ಮತ್ತು ನಮ್ಮ ಸಾಮಾಜಿಕ ಪ್ಲಗಿನ್‌ಗಳನ್ನು ಸಂಯೋಜಿಸುವ ಮೂರನೇ ವ್ಯಕ್ತಿಯ ಸೈಟ್‌ಗಳಲ್ಲಿ ವಿಷಯವನ್ನು ಕಸ್ಟಮೈಸ್ ಮಾಡಲು ಕುಕೀಸ್ ನಮಗೆ ಅನುಮತಿಸುತ್ತದೆ. ನೀವು Facebook ಪುಟ ನಿರ್ವಾಹಕರಾಗಿದ್ದರೆ, ನಿಮ್ಮ ವೈಯಕ್ತಿಕ Facebook ಖಾತೆ ಮತ್ತು Facebook ಪುಟದಿಂದ ಪೋಸ್ಟ್ ಮಾಡುವ ನಡುವೆ ಬದಲಾಯಿಸಲು ಕುಕೀಸ್ ನಿಮಗೆ ಅವಕಾಶ ನೀಡುತ್ತದೆ. ನಿಮ್ಮ Messenger ಚಾಟ್ ವಿಂಡೋಗಳ ಬಳಕೆಯನ್ನು ಬೆಂಬಲಿಸಲು ನಾವು ಸೆಷನ್ ಆಧಾರಿತ ‘ಉಪಸ್ಥಿತಿ’ ಕುಕೀಯಂತಹ ಕುಕೀಸ್ ಬಳಸುತ್ತೇವೆ.
ನಿಮ್ಮ ಸ್ಥಳಕ್ಕೆ ಪ್ರಸ್ತುತವಾಗಿರುವ ವಿಷಯವನ್ನು ನಿಮಗೆ ಒದಗಿಸಲು ಸಹಾಯ ಮಾಡುವುದಕ್ಕಾಗಿ ಸಹ ಕುಕೀಸ್ ಅನ್ನು ನಾವು ಬಳಸುತ್ತೇವೆ.
ಉದಾಹರಣೆಗೆ: ನಿಮ್ಮ ಬ್ರೌಸರ್ ಅಥವಾ ಸಾಧನದಲ್ಲಿ ಇರಿಸಲಾಗಿರುವ ಕುಕಿಯಲ್ಲಿ ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ ಇದರಿಂದ ನೀವು ಸೈಟ್ ಅನ್ನು ನಿಮ್ಮ ಆದ್ಯತೆಯ ಭಾಷೆಯಲ್ಲಿ ನೋಡುತ್ತೀರಿ.
ಕಾರ್ಯಕ್ಷಮತೆ
ನಿಮಗೆ ಸಾಧ್ಯವಾದಷ್ಟು ಉತ್ತಮ ಅನುಭವ ನೀಡುವುದಕ್ಕಾಗಿ ಕುಕೀಸ್ ಅನ್ನು ನಾವು ಬಳಸುತ್ತೇವೆ.
ಉದಾಹರಣೆಗೆ: ಸರ್ವರ್‌ಗಳ ನಡುವೆ ಟ್ರಾಫಿಕ್ ಅನ್ನು ರೂಟ್ ಮಾಡಲು ಮತ್ತು ವಿಭಿನ್ನ ಜನರಿಗೆ ಎಷ್ಟು ತ್ವರಿತವಾಗಿ Meta ಉತ್ಪನ್ನಗಳು ಲೋಡ್ ಆಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಕುಕೀಸ್ ಸಹಾಯ ಮಾಡುತ್ತದೆ. ನಿಮ್ಮ ಪರದೆಯ ಮತ್ತು ವಿಂಡೊಗಳ ಅನುಪಾತ ಮತ್ತು ಆಯಾಮಗಳನ್ನು ರೆಕಾರ್ಡ್ ಮಾಡಲು ಮತ್ತು ನೀವು ಹೈ-ಕಾಂಟ್ರಾಸ್ಟ್ ಮೋಡ್ ಅನ್ನು ಸಕ್ರಿಯಗೊಳಿಸಿದ್ದೀರಾ ಎಂದು ತಿಳಿಯಲು ಕುಕೀಸ್ ನಮಗೆ ಸಹಾಯ ಮಾಡುತ್ತದೆ, ಇದರಿಂದಾಗಿ ನಾವು ನಮ್ಮ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಸರಿಯಾಗಿ ನಿರೂಪಿಸಬಹುದು. ಉದಾಹರಣೆಗೆ, ನಿಮ್ಮ ಸಾಧನದ ಪರದೆಯ ಅತ್ಯುತ್ತಮ ಅನುಭವವನ್ನು ನೀಡುವುದನ್ನು ಒಳಗೊಳ್ಳುವ ಉದ್ದೇಶಗಳಿಗಾಗಿ, ನಾವು 7 ದಿನಗಳ ಜೀವಿತಾವಧಿಯನ್ನು ಹೊಂದಿರುವ ‘dpr’ ಮತ್ತು ‘‘wd’ ಕುಕೀಸ್ ಹೊಂದಿಸುತ್ತೇವೆ.
ವಿಶ್ಲೇಷಣೆಗಳು ಮತ್ತು ಸಂಶೋಧನೆ
ಜನರು Meta ಉತ್ಪನ್ನಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಕುಕೀಸ್ ಅನ್ನು ನಾವು ಬಳಸುತ್ತೇವೆ, ಇದರಿಂದ ಅವುಗಳನ್ನು ನಾವು ಸುಧಾರಿಸಬಹುದು.
ಉದಾಹರಣೆಗೆ: ಜನರು Facebook ಸೇವೆಯನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು, ನಮ್ಮ ಉತ್ಪನ್ನಗಳ ಯಾವ ಭಾಗಗಳನ್ನು ಜನರು ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿ ಕಾಣುತ್ತಾರೆ ಎಂಬುದನ್ನು ವಿಶ್ಲೇಷಿಸಲು ಮತ್ತು ಸುಧಾರಿಸಬಹುದಾದ ವೈಶಿಷ್ಟ್ಯಗಳನ್ನು ಗುರುತಿಸಲು ಕುಕೀಸ್ ನಮಗೆ ಸಹಾಯ ಮಾಡುತ್ತದೆ.
ಮೂರನೇ ವ್ಯಕ್ತಿಯ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು
ನಮ್ಮ ವ್ಯಾಪಾರ ಪಾಲುದಾರರು ನೀವು Facebook ಖಾತೆಯನ್ನು ಹೊ೦ದಿದ್ದರೂ ಅಥವಾ ಹೊಂದಿಲ್ಲದಿದ್ದರೂ, ಲಾಗ್ ಇನ್ ಆಗಿದ್ದರೂ ಇಲ್ಲದಿದ್ದರೂ ತಮ್ಮದೇ ವೆಬ್‌ಸೈಟ್‌ಗಳ ಡೊಮೇನ್‌ಗಳಲ್ಲಿ ಹೊಂದಿಸಲಾದ ಕುಕೀಸ್‌ನಿಂದ Meta ‌ದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ಆಯ್ಕೆ ಮಾಡಬಹುದು. ವಿಶೇಷವಾಗಿ, ನೀವು ಭೇಟಿ ನೀಡುವಂತಹ ವ್ಯಾಪಾರ ಪಾಲುದಾರರ ಡೊಮೇನ್‌ನಲ್ಲಿ _fbc ಅಥವಾ _fbp ಹೆಸರಿನ ಕುಕೀಸ್ ಅನ್ನು ಹೊಂದಿಸಿರಬಹುದು. Meta ‌ದ ಸ್ವಂತ ಡೊಮೇನ್‌ಗಳಲ್ಲಿ ಹೊಂದಿಸಲಾದ ಕುಕೀಸ್‌ನಂತಹದ್ದಲ್ಲದೆ, ನೀವು ನಮ್ಮ ಡೊಮೇನ್‌ಗಳಲ್ಲಿರುವಾಗ ಸೇರಿದಂತೆ ಅವುಗಳು ಹೊಂದಿಸಲಾಗಿರುವ ಸೈಟ್‌ ಅನ್ನು ಹೊರತುಪಡಿಸಿ ಬೇರೆ ಸೈಟ್‌ನಲ್ಲಿರುವಾಗ ಈ ಕುಕೀಸ್ ಅನ್ನು Meta ಪ್ರವೇಶಿಸಲಾಗುವುದಿಲ್ಲ. ಈ ಕುಕೀಸ್ ನೀತಿಯಲ್ಲಿ ಸೂಚಿಸಿರುವಂತೆ ವಿಷಯವನ್ನು ವೈಯಕ್ತೀಕರಿಸುವುದು (ಜಾಹೀರಾತುಗಳನ್ನು ಒಳಗೊಂಡಂತೆ), ಜಾಹೀರಾತುಗಳನ್ನು ಅಳೆಯುವುದು, ವಿಶ್ಲೇಷಣೆಯನ್ನು ಉತ್ಪಾದಿಸುವುದು ಮತ್ತು ಸುರಕ್ಷಿತ ಅನುಭವವನ್ನು ನೀಡುವುದು Meta ದ ಸ್ವಂತ ಡೊಮೇನ್‌ನಲ್ಲಿ ಹೊಂದಿಸಲಾದ ಕುಕೀಸ್‌ನಂತೆಯೆ ಅವು ಕಾರ್ಯನಿರ್ವಹಿಸುತ್ತವೆ.

ನಾವು ಕುಕೀಸ್ ಅನ್ನು ಎಲ್ಲಿ ಬಳಸುತ್ತೇವೆ?

ನಿಮ್ಮ ಕಂಪ್ಯೂಟರ್ ಅಥವಾ ಸಾಧನದಲ್ಲಿ ನಾವು ಕುಕೀಸ್ ಇರಿಸಬಹುದು ಮತ್ತು ನೀವು ಬಳಸುವಾಗ ಅಥವಾ ಭೇಟಿ ನೀಡಿದಾಗ ಕುಕೀಸ್‌ನಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಸ್ವೀಕರಿಸಬಹುದು:

  • Meta ಕಂಪನಿಗಳ ಇತರ ಸದಸ್ಯರ ಮೂಲಕ ಉತ್ಪನ್ನಗಳನ್ನು ಒದಗಿಸಲಾಗಿದೆ; ಮತ್ತು
  • Meta ತಂತ್ರಜ್ಞಾನಗಳನ್ನು ತಮ್ಮ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಸಂಯೋಜಿಸುವ ಕಂಪನಿಗಳು ಸೇರಿದಂತೆ Meta ಉತ್ಪನ್ನಗಳನ್ನು ಬಳಸುವ ಇತರ ಕಂಪನಿಗಳು ಒದಗಿಸುವ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು. ನಿಮ್ಮಿಂದ ಯಾವುದೇ ಮುಂದಿನ ಕ್ರಮಗಳಿಲ್ಲದೆ Meta ಕುಕೀಸ್ ಬಳಸುತ್ತದೆ ಮತ್ತು ಸಾಧನದ ಮಾಹಿತಿ ನಿಮ್ಮ ಚಟುವಟಿಕೆಯ ಬಗ್ಗೆ ಮಾಹಿತಿ ಸೇರಿದಂತೆ ಆ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಗೆ ನೀವು ಭೇಟಿ ನೀಡಿದಾಗ ಮಾಹಿತಿಯನ್ನು ಪಡೆಯುತ್ತದೆ. ನೀವು Facebook ಖಾತೆಯನ್ನು ಹೊ೦ದಿದ್ದರೂ ಅಥವಾ ಹೊಂದಿಲ್ಲದಿದ್ದರೂ, ಲಾಗ್ ಇನ್ ಆಗಿದ್ದರೂ ಆಗಿಲ್ಲದಿದ್ದರೂ ಸಂಭವಿಸುತ್ತದೆ.

Meta ಉತ್ಪನ್ನಗಳಿಗೆ ಸಂಬಂಧಿಸಿದಂತೆ ಇತರ ಕಂಪನಿಗಳು ಕುಕೀಸ್ ಬಳಸುತ್ತವೆಯೇ?

ಹೌದು, ಇತರ ಕಂಪನಿಗಳು ನಮಗೆ ಜಾಹೀರಾತು, ಅಳತೆ, ಮಾರ್ಕೆಟಿಂಗ್ ಮತ್ತು ವಿಶ್ಲೇಷಣಾ ಸೇವೆಗಳನ್ನು ಒದಗಿಸಲು ಮತ್ತು ಕೆಲವು ವೈಶಿಷ್ಟ್ಯಗಳನ್ನು ಒದಗಿಸಲು ಮತ್ತು ನಿಮಗಾಗಿ ನಮ್ಮ ಸೇವೆಗಳನ್ನು ಸುಧಾರಿಸಲು Meta ಉತ್ಪನ್ನಗಳಲ್ಲಿ ಕುಕೀಸ್ ಅನ್ನು ಬಳಸುತ್ತಾರೆ.

ಉದಾಹರಣೆಗೆ, ಇತರ ಕಂಪನಿಗಳ ಕುಕೀಸ್ Meta ಉತ್ಪನ್ನಗಳು ಜಾಹೀರಾತುಗಳನ್ನು ಅವುಗಳ ಕಾರ್ಯಕ್ಷಮತೆ ಮತ್ತು ಪರಿಣಾಮಕಾರಿತ್ವವನ್ನು ಅಳೆಯಲು ಸಹಾಯ ಮಾಡುತ್ತದೆ ಮತ್ತು ಮಾರ್ಕೆಟಿಂಗ್ ಮತ್ತು ವಿಶ್ಲೇಷಣೆಯನ್ನು ಬೆಂಬಲಿಸುತ್ತವೆ. Meta ಉತ್ಪನ್ನಗಳಲ್ಲಿನ ಕೆಲವು ವೈಶಿಷ್ಟ್ಯಗಳು ಕಾರ್ಯನಿರ್ವಹಿಸಲು ಇತರ ಕಂಪನಿಗಳಿಂದ ಕುಕೀಸ್ ಅನ್ನು ಬಳಸುತ್ತವೆ, ಉದಾಹರಣೆಗೆ, ಕೆಲವು ನಕ್ಷೆಗಳು, ಪಾವತಿ ಮತ್ತು ಭದ್ರತಾ ವೈಶಿಷ್ಟ್ಯಗಳು. ಇನ್ನಷ್ಟು ತಿಳಿಯಿರಿ Meta ಉತ್ಪನ್ನಗಳಲ್ಲಿ ಕುಕೀಸ್ ಬಳಸುವಂತಹ ಕಂಪನಿಗಳ ಬಗ್ಗೆ.

ಮೂರನೇ ವ್ಯಕ್ತಿಯ ಕಂಪನಿಗಳು Meta ಉತ್ಪನ್ನಗಳಿಗೆ ಸಂಬಂಧಿಸಿದಂತೆ ತಮ್ಮದೇ ಆದ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಕುಕೀಸ್ ಅನ್ನು ಸಹ ಬಳಸುತ್ತವೆ. ಇತರ ಕಂಪನಿಗಳು ಕುಕೀಸ್ ಅನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು, ದಯವಿಟ್ಟು ಅವರ ನೀತಿಗಳನ್ನು ಪರಿಶೀಲಿಸಿ.

ನಿಮ್ಮ ಮಾಹಿತಿಯನ್ನು ನೀವು ಹೇಗೆ ನಿಯಂತ್ರಿಸಬಹುದು?

ವಿಷಯ ಮತ್ತು ಸೇವೆಗಳನ್ನು ವೈಯಕ್ತೀಕರಿಸಲು ಮತ್ತು ಸುಧಾರಿಸಲು, ಸುರಕ್ಷಿತ ಅನುಭವವನ್ನು ಒದಗಿಸಲು ಮತ್ತು Meta ಉತ್ಪನ್ನಗಳ ಒಳಗೆ ಮತ್ತು ಹೊರಗೆ ಉಪಯುಕ್ತ ಮತ್ತು ಸಂಬಂಧಿತ ಜಾಹೀರಾತುಗಳನ್ನು ನಿಮಗೆ ತೋರಿಸುವುದಕ್ಕೆ ಸಹಾಯ ಮಾಡಲು ನಾವು ಕುಕೀಸ್ ಅನ್ನು ಬಳಸುತ್ತೇವೆ. ಈ ಕೆಳಗೆ ವಿವರಿಸಲಾದ ಪರಿಕರಗಳನ್ನು ಬಳಸಿಕೊಂಡು ನಿಮಗೆ ಜಾಹೀರಾತುಗಳು ಮತ್ತು ಹೆಚ್ಚಿನದನ್ನು ತೋರಿಸಲು ನಾವು ಡೇಟಾವನ್ನು ಹೇಗೆ ಬಳಸುತ್ತೇವೆ ಎಂಬುದನ್ನು ನೀವು ನಿಯಂತ್ರಿಸಬಹುದು.
ನೀವು Facebook ಖಾತೆಯನ್ನು ಹೊಂದಿದ್ದರೆ:
  • ನೀವು ನಿರ್ದಿಷ್ಟ ಜಾಹೀರಾತನ್ನು ಏಕೆ ವೀಕ್ಷಿಸುತ್ತಿದ್ದೀರಿ ಎಂಬುದನ್ನು ತಿಳಿಯಲು ಮತ್ತು ನಿಮಗೆ ಜಾಹೀರಾತುಗಳನ್ನು ತೋರಿಸಲು ನಾವು ಸಂಗ್ರಹಿಸುವ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ ಎಂಬುದನ್ನು ನಿಯಂತ್ರಿಸಲು ನಿಮ್ಮ ಜಾಹೀರಾತು ಆದ್ಯತೆಗಳನ್ನು ನೀವು ಬಳಸಬಹುದು.
  • ನಿಮಗೆ ಉತ್ತಮ ಜಾಹೀರಾತುಗಳನ್ನು ತೋರಿಸುವುದಕ್ಕಾಗಿ, ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಒಳಗೊಂಡಂತೆ Meta ಕಂಪನಿ ಉತ್ಪನ್ನಗಳ ಹೊರಗೆ ನಿಮ್ಮ ಚಟುವಟಿಕೆಯ ಕುರಿತು ಜಾಹೀರಾತುದಾರರು ಮತ್ತು ಇತರೆ ಪಾಲುದಾರರು ನಮಗೆ ಒದಗಿಸುವ ಡೇಟಾವನ್ನು ನಾವು ಬಳಸುತ್ತೇವೆ. ನಿಮ್ಮ ಜಾಹೀರಾತು ಸೆಟ್ಟಿಂಗ್‌ಗಳಲ್ಲಿ ನಿಮಗೆ ಜಾಹೀರಾತುಗಳನ್ನು ತೋರಿಸುವುದಕ್ಕಾಗಿ ಈ ಡೇಟಾವನ್ನು ನಾವು ಬಳಸುತ್ತೇವೆಯೇ ಎಂಬುದನ್ನು ನೀವು ನಿಯಂತ್ರಿಸಬಹುದು.
  • Meta ಕಂಪನಿ ಉತ್ಪನ್ನಗಳ ಹೊರಗೆ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ನಿಮಗೆ ಜಾಹೀರಾತುಗಳನ್ನು ತೋರಿಸುವುದಕ್ಕಾಗಿ Meta ಪ್ರೇಕ್ಷಕರ ನೆಟ್‌ವರ್ಕ್ ಎನ್ನುವುದು ಜಾಹೀರಾತುದಾರರಿಗಾಗಿ ಒಂದು ವಿಧಾನವಾಗಿದೆ. ನೀವು ಯಾವ ಜಾಹೀರಾತುಗಳನ್ನು ನೋಡಲು ಆಸಕ್ತಿ ಹೊಂದಿರಬಹುದು ಎಂಬುದನ್ನು ನಿರ್ಧರಿಸಲು ನಿಮ್ಮ ಜಾಹೀರಾತು ಆದ್ಯತೆಗಳನ್ನು ಬಳಸುವುದರ ಮೂಲಕ ಪ್ರೇಕ್ಷಕರ ನೆಟ್‌ವರ್ಕ್ ಸಂಬಂಧಿತ ಜಾಹೀರಾತುಗಳನ್ನು ತೋರಿಸುತ್ತದೆ. ನಿಮ್ಮ ಜಾಹೀರಾತು ಸೆಟ್ಟಿಂಗ್‌ಗಳಲ್ಲಿ ಇದನ್ನು ನೀವು ನಿಯಂತ್ರಿಸಬಹುದು
  • ನಿಮ್ಮ Facebook ಹೊರಗಿನ ಚಟುವಟಿಕೆಯನ್ನು ನೀವು ಪರಿಶೀಲಿಸಬಹುದು, ಇದು ವ್ಯವಹಾರಗಳು ಮತ್ತು ಸಂಸ್ಥೆಗಳು ಅವರ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವಂತಹ ಅವರೊಂದಿಗಿನ ನಿಮ್ಮ ಸಂವಹನಗಳ ಬಗ್ಗೆ ನಮ್ಮೊಂದಿಗೆ ಹಂಚಿಕೊಳ್ಳುವ ಚಟುವಟಿಕೆಯ ಸಾರಾಂಶವಾಗಿದೆ. ಈ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಅವರು Meta ಪಿಕ್ಸೆಲ್‌ನಂತಹ ನಮ್ಮ ವ್ಯಾಪಾರ ಪರಿಕರಗಳನ್ನು ಬಳಸುತ್ತಾರೆ. Meta ಉತ್ಪನ್ನಗಳಲ್ಲಿ ನಿಮಗೆ ಹೆಚ್ಚು ವೈಯಕ್ತಿಕ ಅನುಭವವನ್ನು ನೀಡುವಂತಹ ಕೆಲಸಗಳನ್ನು ಮಾಡಲು ಇದು ನಮಗೆ ಸಹಾಯ ಮಾಡುತ್ತದೆ. Facebook ಹೊರಗಿನ ಚಟುವಟಿಕೆ, ನಾವು ಅದನ್ನು ಹೇಗೆ ಬಳಸುತ್ತೇವೆ ಮತ್ತು ನೀವು ಅದನ್ನು ಹೇಗೆ ನಿರ್ವಹಿಸಬಹುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ಪ್ರತಿಯೊಬ್ಬರೂ:
ನೀವು Meta ಮತ್ತು ಇತರೆ ಭಾಗವಹಿಸುತ್ತಿರುವ ಕಂಪನಿಗಳಿಂದ ಆನ್‌ಲೈನ್ ಆಸಕ್ತಿ-ಆಧಾರಿತ ಜಾಹೀರಾತುಗಳನ್ನು ವೀಕ್ಷಿಸುವುದರಿಂದ ನೀವು US ನಲ್ಲಿ ಡಿಜಿಟಲ್ ಜಾಹೀರಾತು ಅಲೆಯನ್ಸ್ ಕೆನಡಾದಲ್ಲಿ ಕೆನಡಾದ ಡಿಜಿಟಲ್ ಜಾಹೀರಾತು ಅಲೆಯನ್ಸ್ ಅಥವಾ ಯುರೋಪಿನಲ್ಲಿ ಯುರೋಪಿಯನ್ ಇಂಟರಾಕ್ಟಿವ್ ಡಿಜಿಟಲ್ ಜಾಹೀರಾತು ಅಲೆಯನ್ಸ್ ಮೂಲಕ ಅಥವಾ ಲಭ್ಯವಿರುವಲ್ಲಿ Android, iOS 13 ಅಥವಾ iOS ನ ಹಿಂದಿನ ಆವೃತ್ತಿ ಬಳಸಿ. ನಿಮ್ಮ ಮೊಬೈಲ್ ಸಾಧನ ಸೆಟ್ಟಿಂಗ್‌ಗಳ ಮೂಲಕ ಹೊರಗುಳಿಯಬಹುದು. ನಮ್ಮ ಕುಕೀ ಬಳಕೆಯನ್ನು ನಿರ್ಬಂಧಿಸುವ ಜಾಹೀರಾತು ಬ್ಲಾಕರ್‌ಗಳು ಮತ್ತು ಪರಿಕರಗಳು ಈ ನಿಯಂತ್ರಣಗಳಿಗೆ ಅಡ್ಡಿಯಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ.
ಆನ್‌ಲೈನ್ ಜಾಹೀರಾತಿನ ಕುರಿತು ಹೆಚ್ಚಿನ ಮಾಹಿತಿ:
ನಾವು ಕೆಲಸ ಮಾಡುವ ಜಾಹೀರಾತು ಕಂಪನಿಗಳು ಸಾಮಾನ್ಯವಾಗಿ ತಮ್ಮ ಸೇವೆಗಳ ಭಾಗವಾಗಿ ಕುಕೀಸ್ ಮತ್ತು ಅಂತಹುದೇ ತಂತ್ರಜ್ಞಾನಗಳನ್ನು ಬಳಸುತ್ತವೆ. ಕುಕೀಸ್ ಮತ್ತು ಅವರು ನೀಡುವ ಆಯ್ಕೆಗಳನ್ನು ಜಾಹೀರಾತುದಾರರು ಸಾಮಾನ್ಯವಾಗಿ ಹೇಗೆ ಬಳಸುತ್ತಾರೆಂಬುದರ ಕುರಿತು ಇನ್ನಷ್ಟು ತಿಳಿಯಲು, ಈ ಸಂಪನ್ಮೂಲಗಳನ್ನು ನೀವು ಪರಿಶೀಲಿಸಬಹುದು:
ಬ್ರೌಸರ್ ಕುಕೀ ನಿಯಂತ್ರಣಗಳು:
ಹೆಚ್ಚುವರಿಯಾಗಿ, ನಿಮ್ಮ ಬ್ರೌಸರ್ ಅಥವಾ ಸಾಧನವು ಬ್ರೌಸರ್ ಕುಕೀಸ್ ಹೊಂದಿಸಲಾಗಿದೆಯೆ ಎಂದು ಆಯ್ಕೆ ಮಾಡಲು ಮತ್ತು ಅವುಗಳನ್ನು ಅಳಿಸಲು ನಿಮಗೆ ಅನುಮತಿಸುವ ಸೆಟ್ಟಿಂಗ್‌ಗಳನ್ನು ನೀಡಬಹುದು. ಈ ನಿಯಂತ್ರಣಗಳು ಬ್ರೌಸರ್‌ನಿಂದ ಬದಲಾಗುತ್ತವೆ ಮತ್ತು ತಯಾರಕರು ತಾವು ಲಭ್ಯವಾಗುವಂತೆ ಮಾಡುವ ಸೆಟ್ಟಿಂಗ್‌ಗಳು ಮತ್ತು ಯಾವುದೇ ಸಮಯದಲ್ಲಿ ಅವುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಬದಲಾಯಿಸಬಹುದು. 23 ಜುಲೈ 2021 ರ ಹೊತ್ತಿಗೆ, ನೀವು ಜನಪ್ರಿಯ ಬ್ರೌಸರ್‌ಗಳು ನೀಡುವ ನಿಯಂತ್ರಣಗಳ ಕುರಿತು ಹೆಚ್ಚುವರಿ ಮಾಹಿತಿಯನ್ನು ಈ ಕೆಳಗಿನ ಲಿಂಕ್‌ಗಳಲ್ಲಿ ಕಾಣಬಹುದು. ನೀವು ಬ್ರೌಸರ್ ಕುಕೀ ಬಳಕೆಯನ್ನು ನಿಷ್ಕ್ರಿಯಗೊಳಿಸಿದ್ದರೆ Meta ಉತ್ಪನ್ನಗಳ ಕೆಲವು ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಈ ನಿಯಂತ್ರಣಗಳು ನಾವು ನಿಮಗೆ ನೀಡುವ ನಿಯಂತ್ರಣಗಳಿಂದ ಭಿನ್ನವಾಗಿವೆ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ.


ಕೊನೆಯ ಪರಿಷ್ಕರಣೆಯ ದಿನಾಂಕ: 4 ಜನವರಿ 2022