#ನಗೆ ಹನಿ

ಮೊದಲ ಅನುಭವ

0

ನಟ – ನಿರ್ದೇಶಕನೊಬ್ಬ ತನ್ನದೇ ನಿರ್ಮಾಣದಲ್ಲಿ ಹೊಸದಾದ ಚಿತ್ರ ತಯಾರಿಸುತ್ತಿದ್ದ ಪತ್ರಕರ್‍ತನೊಬ್ಬ ಕೇಳಿದ – ಸಾರ್ ನಿಮ್ಮ ಚಿತ್ರದಲ್ಲಿ ನೀವು ಯಾಕೆ ಭಿಕ್ಷುಕನ ಪಾತ್ರ ಮಾಡುತ್ತಿದ್ದೀರಾ? ಅದಕ್ಕಾತ ಹೇಳಿದ – ಯಾವುದಕ್ಕೂ ಮುನ್ನ ಅನುಭವ ಇದ್ದರೆ ಒಳ್ಳೆಯದು ಅಂತ… *****

#ಕವಿತೆ

ಹಸಿರು ನನ್ನದು ಹೂವು ನನ್ನದು

0

ಹಸಿರು ನನ್ನದು ಹೂವು ನನ್ನದು ನಾನು ಹರುಷದ ಹೊಂಗೊಳಾ ಬೆಳಗು ನನ್ನದು ಬಣ್ಣ ನನ್ನದು ನಾನು ನಿನ್ನಯ ಬೆಳ್ಗೊಳ ||೧|| ಮುಗಿಲ ತೋರಣ ಚರಣ ಚರಣಾ ನೋಡು ಬಂದನು ಭಾಸ್ಕರಾ ಕಡಲ ಕಾಮಿನಿ ಇರುಳ ಯಾಮಿನಿ ನೋಡು ಹಾಡಿದ ಸುಸ್ವರಾ ||೨|| ಏನು ಮರಣಾ ಮತ್ತೆ ಜನನಾ ಮಂಚ ತೂಗಿದೆ ನಾಟಕಂ ಮತ್ತೆ ಹೂಟಂ ಮತ್ತೆ […]

#ಹನಿ ಕಥೆ

ಆತೀರ-ಈತೀರ

0

ಒಮ್ಮೆ ನದಿಯ ಈಚೆಯ ತೀರ ಹರಿಯುವ ನೀರಿನ ಕನ್ನಡಿಯಲ್ಲಿ ಅಚೆಯ ತೀರದ ಸೌಂದರ್ಯವನ್ನು ಮೆಚ್ಚಿಕೊಂಡಾಗ ಮದುವೆಗೆ ನಿಂತ ಶೀಲವಂತ ಮದುಮಗಳಂತೆ ಕಂಡಿತು. ಈಚೆಯ ತೀರ “ನನ್ನ ಕೈ ಹಿಡಿ” ಎಂದು ಅಂಗಲಾಚಿತು. “ನಿನ್ನ ತೀರದಲ್ಲಿ ಗದ್ದಲ, ಗೊಂದಲ, ಪ್ರವಾಸೋದ್ಯಮ, ವ್ಯಾಪಾರಕ್ಕೆ ಸಿಕ್ಕಿ, ಸೊರಗಿ ನೀನು ಮಾಲಿನ್ಯದಲ್ಲಿ ಕುರೂಪಿಯಾಗಿದ್ದೀ. ನಾನು ಎಂದಿಗೂ ಸೇರಲಾರೆ. ನಾನು ಪ್ರಕೃತಿಯ ವಿಕೃತಿಗೆ […]

#ಕವಿತೆ

ನನ್ನ ಆತ್ಮ

0

ನನ್ನ ಆತ್ಮವನ್ನೊಮ್ಮೆ ಕಾಣಬೇಕೆಂದು ಬಯಸಿ ಎದೆಯೊಳಗೆ ಇಣುಕಿದೆ; ಅಲ್ಲಿ, ಅದು- ಕೊಳದ ದಂಡೆಯಲಿ ವಿಹರಿಸುವ ಬದಲು ಚಂಡಮಾರುತದೊಡನೆ ಹೋರಾಡುತ್ತಿತ್ತು. ನದಿಯ ನೀರಲ್ಲಿ ಮೀಯುವ ಬದಲು ಕಂಬನಿಯ ಕಡಲಲ್ಲಿ ಕೈತೊಳೆಯುತ್ತಿತ್ತು. ತಂಗಾಳಿಯ ಅಲೆಗಳಲಿ ಆನಂದಿಸುವ ಬದಲು ನಿಟ್ಟುಸಿರ ಕಾಡಲ್ಲಿ ಹುಡುಕುತ್ತಿತ್ತು. ಬನದ ಹಸಿರಲ್ಲಿ ಹೂವಾಗುವ ಬದಲು ಬರದ ಬೇಗೆಯಲಿ ಬೇಯುತ್ತಿತ್ತು. ನಲಿವ ನವಿಲಾಗಿ ಕುಣಿಯುವ ಬದಲು ನೋವ […]

#ಕವಿತೆ

ಏಕೆ? ಹೆಂಡತಿ..

0

ಏಕೆ? ಹೆಂಡತಿ.. ನಾ ಅಂದುಕೊಂಡ ಹಾಗೆ ಒಳ್ಳೆಯವಳಲ್ಲವೆಂದು ಕೊರಗುವೆ| ಏಕೆ? ಅನ್ಯರಿಗವಳ ಹೋಲಿಸಿ ಕ್ಷಣಕ್ಷಣಕೊಮ್ಮೆ ಒಳಗೊಳಗೆ ಅಸಮಧಾನಿಯಾಗುವೆ|| ಗುಣಗಳು ಒಮ್ಮೆಲೆ ಬದಲಾಗುವುದಿಲ್ಲ ಸ್ವಭಾವಗಳು ಸುಮ್ಮನೆ ಸರಿಯಾಗುವುದಿಲ್ಲ| ಕಾಲ ಬೇಕು, ಕಾಯಬೇಕು ನೀ ತಿಳಿದಿರುವುದೇ ಸರಿಯಂದೇನಲ್ಲಾ|| ಐದು ಬೆರಳು ಒಂದೇ ಸಮವಿಲ್ಲ ಹಾಗೆಯೇ ಎಲ್ಲರಲ್ಲಿ ಎಲ್ಲಾ ಗುಣಗಳಿರುವುದು ಸಾಧ್ಯವಿಲ್ಲಾ| ಎಲ್ಲಿ ಹೋಲಿಕೆಯೋ ಅಲ್ಲಿ ಸ್ಪರ್ಧೆ ಅಸಮಧಾನವು ಹುಟ್ಟಿಸುವುದು|| […]

#ವಿಜ್ಞಾನ

ಕೊಂಬಿಲ್ಲದ ಹಸುಗಳ ಸೃಷ್ಟಿ !

0

ಸಾಮಾನ್ಯವಾಗಿ ನಾವು ಮೇಕೆ, ಹೋತ, ಟಗರು, ಹಸು, ಹೋರಿ, ಜಿಂಕೆ, ಎತ್ತು, ಎಮ್ಮೆ ಮುಂತಾದ ಕೊಂಬುಗಳ್ಳುಳ್ಳ ಪ್ರಾಣಿಗಳನ್ನು ಸಾಕುತ್ತೇವೆ. ಕೆಲವು ಪ್ರಾಣಿಗಳ ಕೊಂಬುಗಳು ಪ್ರಾಣಾಂತಿಕ ಭಯವನ್ನು ಸೃಷ್ಟಿಸಿದರೆ, ಕೆಲವು ವ್ಯಕ್ತಿಗಳಿಗೆ ಇರಿದು ಅಪಾಯವನ್ನುಂಟು ಮಾಡುತ್ತವೆ. ಕೆಲವಂತೂ ಸಾಯಿಸಿಯೇ ಬಿಡುತ್ತವೆ. ಕೊಂಬುಳ್ಳ (ಭೀಕರವಾದ ) ಪ್ರಾಣಿಗಳಂದರೆ ಹಾಯಬಹುದೆಂಬ ಭಯ ಎಲ್ಲರಿಗೂ ಇದ್ದೆ ಇರುತ್ತದೆ. ಸಾಕಲೇಬೇಕೆಂಬ ಅನಿವಾರ್ಯತೆ ಕೂಡ […]

#ವಚನ

ಈ ಜಗದೊಳೆಲ್ಲರೊಪ್ಪುವ ಮಾತನಾಡಿದವರುಂಟೇ ?

0

ಬೀಜ ವೃಕ್ಷದೊಳಾವುದಿಳೆಗೆ ಮೊದಲೆಂದು ವ್ಯಾಜ್ಯವಿಲ್ಲದಿದುವೆ ಸತ್ಯವೆನುತೊಂದು ರಾಜಿ ಮಾತನೊರೆವುದಾರಿಂಗೆಂದಾದೊಡಂ ಈ ಜಗದೊಳತಿ ಕಠಿಣ ಕಜ್ಜವಿರುತಿರಲೆನ್ನ ನ್ನ ಜ್ಞಾನದ ಮಿತಿಯಿದನು ಸೇರದಿರೆ ಮನ್ನಿಸಿರಿ – ವಿಜ್ಞಾನೇಶ್ವರಾ *****

#ಕವಿತೆ

ನೀಛಾಗ್ರೇಸರ

0

ಮುದ್ದಾದ ಕುರಿಮರಿಯ ತರುವೆ ಬೆಳೆಸುವೆ ಕಕ್ಕುಲತೆಯಲಿ ಕೇಳೀತೆ ಹಸಿವೆಂದು ಬೆಬ್ಬಳಿಸಿಯಾತೆ ಬಾಯಾರಿಕೆಯೆಂದು ಮೊರೆದೀತೆ ದೇಹಾಲಸ್ಯವೆಂದು ನಮ್ಮಂತೆಯೇ ಅಲ್ಲವೆ ಅದರದೂ ಜೀವವೆಂದು. ಸಗಣಿ ಬಾಚುವೆ ಮೈಯ ತೊಳೆಯುವೆ ಕೈಯಾರೆ ತಿನ್ನಿಸಿ, ಕುಣಿಸಿ, ಆಡಿಸಿ ಒಂದು ಹೆಸರೂ ಕರೆಯುವೆ ಅಕ್ಕರೆ ತೋರುವೆ ಹಲವು ಹತ್ತು ರೀತಿಯಲಿ. ಕಣ್ಣಿಟ್ಟು ಕಾಯುವೆ ಎತ್ತೆಂದರತ್ತ ಬಿಡದೆ ನಾಯಿ, ತೋಳಗಳ ಬಾಯಿಗೆ ಕೊಡದೆ ಘಾಸಿಗೆಡೆ […]

#ಸಣ್ಣ ಕಥೆ

ಸನ್ಯಾಸಿ ರತ್ನ

0

– ೧ – ರಾಜ, ರತ್ನ ಇಬ್ಬರೂ ಸ್ನೇಹಿತರು. ಒಂದೇ ಕ್ಲಾಸಿನಲ್ಲಿ ಅವರಿಬ್ಬರೂ ಓದುತ್ತಿದ್ದುದು, ಒಂದೇ ಹಾಸ್ಟೆಲಿನಲ್ಲಿ ಅವರಿಬ್ಬರಿಗೂ ವಾಸ. ಇಬ್ಬರ ಪ್ರಾಯವೂ ಒಂದೇ; ಜಾತಿಯ ಒಂದೇ. ರಾಜ ತಂದೆತಾಯಿ ಯರಿಗೊಬ್ಬನೇ ಮಗ. ರತ್ನನಿಗೆ ಒಬ್ಬಳು ತಂಗಿ ಇದ್ದಳು. ಒಂದು ವಿಷಯ ಹೊರತು ಬೇರೆಲ್ಲಾ ವಿಷಯಗಳಲ್ಲಿ ಇವರಿಬ್ಬರು ಒಂದು. ರಾಜನಿಗೆ ರತ್ನನ ತಂಗಿಯನ್ನು ಕೊಡುವುದು ನಿಶ್ಚಯವಾಗಿತ್ತು. […]