ಕಥೆ

#ಸಣ್ಣ ಕಥೆ

ಬೇಡಾದವನು

0

ನನಗಿಂತಹ ಪರಿಸ್ಥಿತಿ ಬರುತ್ತದೆಂದು ಕನಸಲ್ಲೂ ಅಂದುಕೊಂಡವನಲ್ಲ. ಎಲ್ಲರೂ ನನ್ನ ಸಾವನ್ನು ಬಯಸುತ್ತಿದ್ದಾರೆ; ನಾನೇ ಸಾವನ್ನು ಬಯಸುತ್ತಿದ್ದೇನೆಯೇ; ನನಗರ್ಥವಾಗುತ್ತಿಲ್ಲ. ಯಾರಿಗೆತಾನೆ ಸಾಯಲು ಇಷ್ಟ? ಅಷ್ಟಕ್ಕೂ ನನಗಿನ್ನೂ ಅರವತ್ತರ ಹತ್ತಿರ ಹತ್ತಿರ, ರಿಟೈರ್ ಆಗಿ ಎರಡು ವರ್ಷ ಆದಂತಿಲ್ಲ. ಪೆರಾಲಿಸಸ್ ಸ್ಟ್ರೋಕ್ ಆಗಿ ಬಲಭಾಗ ಪೂರಾ ಬಿದ್ದು ಹೋಗಿದೆ. ಬಾಯಿ ಸೊಟ್ಟಗಾಗಿರಲೂಬಹುದು. ಮಾತು ಗಂಟಲಿನಿಂದ ಈಚೆ ಬರುತ್ತಿಲ್ಲ. ಬ್ರೇನ್‌ಗೆ […]

#ಕಾದಂಬರಿ

ಮುಸ್ಸಂಜೆಯ ಮಿಂಚು – ೧೦

0

ಅಧ್ಯಾಯ ೧೦ ಅಡುಗೆ ಭಟ್ಟರ ಅವಾಂತರ “ವಾಸು, ಇದೇನು ಮಾಡ್ತಾ ಇದ್ದೀರಿ? ಸಾಮಾನು ಕಡಿಮೆ ಇದೆ ಅಂತ ಅಡುಗೆಯವರು ಹೇಳ್ತಾ ಇದ್ದಾರೆ. ನೀವು ಮಾತ್ರ ಬಿಲ್ ಸರಿಯಾಗಿ ಕೊಡ್ತಾ ಇದ್ದೀರಿ, ಯಾಕೆ ವಾಸು?” ಗಂಭೀರವಾಗಿ ಪ್ರಶ್ನಿಸಿದಳು ರಿತು. “ಇಲ್ಲ ಮೇಡಮ್, ಅಡುಗೆಯವರು ಸರಿಯಾಗಿ ಸಾಮಾನನ್ನ ಲೆಕ್ಕ ಹಾಕಿಕೊಂಡಿಲ್ಲ. ಪ್ರತಿ ಸಾರಿನೂ ಇಷ್ಟೇ ತರುತ್ತಾ ಇದ್ದದ್ದು” ಅಲಕ್ಷ್ಯದಿಂದ […]

#ಹನಿ ಕಥೆ

ವಿರಹ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಪಾರ್ಕಿನಲ್ಲಿ ಹುಡುಗ ತನ್ನ ಪ್ರೇಯಸಿಗಾಗಿ ದಿನಗಟ್ಟಲೆ ಕಾದು ಕುಳಿತ. ಅವಳು ಬರಲೇ ಇಲ್ಲ. ಅವನ ಹೃದಯ ಬರಿದಾಯಿತು. ವಿರಹದ ನೋವಿನಲ್ಲಿ ಮರದ ಎಲೆಗಳನ್ನು ಕಿತ್ತಿ ಬೋಳುಮಾಡಿದ. ಮಾರನೆಯ ದಿನ ಪಾರ್ಕಿಗೆ ಬಂದು ನೋಡಿದ. ಪ್ರಿಯತಮೆಯ ಶವ ಮರದ ರೆಂಬೆಯಲ್ಲಿ ತೂಗಾಡುತ್ತಿತ್ತು. ಮರ ಹೇಳಿತು- “ನನ್ನ ಬೋಳಾದ ರೆಂಬೆ ಕೈಯ್ಯಲ್ಲಿ ನಿನ್ನ ಪ್ರಿಯತಮೆಯನ್ನು ಹಿಡಿದಿರುವೆ” ಎಂದಿತು. ಪ್ರೀತಿಸಿದ […]

#ನೀಳ್ಗತೆ

ಕಾರ್ಯಕ್ರಮ

0
Latest posts by ಬಂದಗದ್ದೆ ರಾಧಾಕೃಷ್ಣ (see all)

ಭಾಗ – ೧ ಬಸವಣ್ಣ ಅಡಕೆ ಮರಾನ ಅಪ್ಪಿ ಹಂಡಕಂದು ಜೀಕಿ ಜೀಕಿ ಮ್ಯಾಲೆ ಹೋಗತಿರಬಕಾರೆ ಅವನ ಕೈಕಾಲಿನ ಮಾಂಸಖಂಡ ಮತ್ತು ನರಗಳು ಎಳೆದುಬಿಟ್ಟ ಹಂಗೆ ಆಗದಾ ಹೆಗಡೆ ನೋಡತಾ ನಿಂತಿದ್ದ. ಶ್ರೀಧರ ಹೆಗಡರೇ ಅಂತ ಸಣ್ಣ ಧ್ವನಿಯಾಗೆ ಕರೆದ ಸದ್ದು ಕೇಳಿದ ಹೆಗಡೆ ಮ್ಯಾಲೆ ನಟ್ಟಿದ್ದ ಕಣ್ಣಿನ ದೃಷ್ಟೀನ ಬದಲು ಮಾಡಿ ಎದುರಿಗೆ ನಿಂತಿದ್ದ […]

#ಕಾದಂಬರಿ

ಮುಸ್ಸಂಜೆಯ ಮಿಂಚು – ೯

0

ಅಧ್ಯಾಯ ೯ ಅಮ್ಮ-ಮಗನ ಕಥೆ ಸರೋಜಮ್ಮ-ಗೋವಿಂದಪ್ಪ ದಂಪತಿಗೆ ಮದುವೆಯಾಗಿ ಬಹಳ ವರ್ಷಗಳಾದರೂ ಮಕ್ಕಳಿಲ್ಲದೆ ಕೊರಗುತ್ತಿದ್ದರು. ಪೂಜೆ, ವ್ರತ, ಆಸ್ಪತ್ರೆ ಎಲ್ಲಾ ಆದರೂ ಫಲ ಮಾತ್ರ ದೊರೆತಿರಲಿಲ್ಲ. ಮಕ್ಕಳಿಲ್ಲದ ಸಂಕಟ ಕಾಡಿ, ಹಿಂಸಿಸುತ್ತಿತ್ತು. ಒಂದು ಮಗುವಿಗಾಗಿ ಹಂಬಲಿಸುತ್ತಿದ್ದ ದಂಪತಿಗೆ ದೇವರೇ ವರ ಕೊಟ್ಟಂತೆ, ಆಗ ತಾನೇ ಹುಟ್ಟಿದ ಗಂಡುಮಗುವನ್ನು ರಸ್ತೆ ಬದಿ ಮಲಗಿಸಿ ಹೋಗಿದ್ದಾರೆ ಎಂದು ತಿಳಿದೊಡನೆ […]

#ಹನಿ ಕಥೆ

ವಂಚಕ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

“ನೀನು ಪ್ರೀತಿಸದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದ ಹುಡುಗ. ಹುಡುಗಿ ನಂಬಿ ತನುಮನ ಅರ್ಪಿಸಿದಳು. ಹುಡುಗನಿಗೆ ತೃಪ್ತಿಯಾಯಿತು. “ಮದುವೆಯಾಗು” ಎಂದು ಕೇಳಿದಳು ಹುಡುಗಿ. “ನೋಡು, ಈ ಹುಡಿಗಿಯನ್ನು ನಾನು ಪ್ರೀತಿಸಿ ಮದುವೆ ಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳಂತೆ. ನಾನೇನು ಮಾಡಲಿ? ನನ್ನ ಅರ್ಥ ಮಾಡಿಕೊಂಡು ದೂರ ಹೋಗಿಬಿಡು” ಎಂದು ಹೇಳಿ ಅವನೇ ದೂರ ಸರಿದು ಬಿಡುತ್ತಾನೆ. *****

#ಸಣ್ಣ ಕಥೆ

ಆ ರಾತ್ರಿ

0
ವರದರಾಜ ಹುಯಿಲಗೋಳ
Latest posts by ವರದರಾಜ ಹುಯಿಲಗೋಳ (see all)

ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು ತೋರಿಸಿದವು! ಸುಧಾ ಕಸಪೊರಕೆಯಿಂದ ಕಸ ಗೂಡಿಸುತ್ತಿದ್ದಳು. ಅವಳನ್ನು ನೋಡಿ “ಏನು ಇನ್ನೂ ಕಸ ಉಡುಗುವುದೇ ಮುಗಿದಿಲ್ಲವೇ?” ಎಂದು ವಸಂತ ಕೇಳಿದ. “ಈಗಿನ್ನು ಎರಡು ಗಂಟೆ” ಸುಧಾ ಈ […]

#ಕಾದಂಬರಿ

ಮುಸ್ಸಂಜೆಯ ಮಿಂಚು – ೮

0

ಅಧ್ಯಾಯ ೮ ‘ನಮ್ಮ ಮನೆ’ಯ ಕಥೆ ಸ್ವಾರ್ಥವಿಲ್ಲದ ಜೀವನ ಇಷ್ಟೊಂದು ನೆಮ್ಮದಿ ತರಬಹುದೇ ಎಂಬ ಪ್ರಶ್ನೆ ಹಲವಾರು ಬಾರಿ ವಸುವಿನಲ್ಲಿ ಮೂಡಿ ಮರೆಯಾಗುತ್ತಿತ್ತು. ಆದರೆ ವೆಂಕಟೇಶನ ವರ್ತನೆ ಅವಳನ್ನು ಸಾಕಷ್ಟು ಕುಗ್ಗಿಸುತ್ತಿತ್ತು. ಎಂಥ ಉದಾತ್ತ ವ್ಯಕ್ತಿ ವೆಂಕಟೇಶ್, ಯಾಕೆ ಹಾಗೆ ಬದಲಾಗಿಬಿಟ್ಟರು? ನನಗಾಗಿ ಸಹಿಸಬೇಕಿತ್ತು, ವೆಂಕಟೇಶ್ ಆರದ ಗಾಯ ಮಾಡಿಬಿಟ್ಟರು. ಈ ಗಾಯ ಕೊನೆವರೆಗೂ ನನ್ನ […]

#ಹನಿ ಕಥೆ

ನಿರ್‍ದಯಿ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಅವನೊಬ್ಬ ಸೋಂಬೇರಿ, ಸತ್ತ ಕೋತಿಯ ಶವ ಅವನ ಹೊಟ್ಟೆ ಹಸಿವಿಗೆ ಅಧಾರ ಮಾಡಿಕೊಳ್ಳುತ್ತಾನೆ. ಬಿಳಿಯ ಬಟ್ಟೆಯ ಮೇಲೆ ಕೋತಿಯ ಶವವಿಟ್ಟು ಅದಕ್ಕೆ ಅರಿಶಿನ, ಕುಂಕುಮ, ಹೂವಿಟ್ಟು “ಶವ ಸಂಸ್ಕಾರ ಮಾಡಬೇಕು ಕಾಣಿಕೆ ಹಾಕಿ” ಎಂದು ಬಾಯಿ ಒಣಗಿಸಿಕೊಂಡು ಅಂಗಲಾಚಿ ಬೇಡುತ್ತಾನೆ. ಒಂದು ಗಂಟೆಯೊಳಗೆ ಕಾಣಿಕೆಯಿಂದ ಜೋಬು ತುಂಬುತ್ತದೆ. ಕೋತಿಯ ಶವವನ್ನು ಅನಾಥವಾಗಿ ಬಿಟ್ಟು ಹೋಟಲಿಗೆ ಹೋಗಿ […]

#ಸಣ್ಣ ಕಥೆ

ರಾಜಕೀಯ ಮುಖಂಡರು

0

ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ ಕಷ್ಟ ಸುಖಗಳನ್ನು ವಿಚಾರಿಸಿ ತಕ್ಕ ರೀತಿ ಪರಿಹಾರಮಾಡುತ್ತಿದ್ದುದು ; ಗ್ರಾಮಸ್ಥರ ಸಹಕಾರ, ಪಾರ ಶಾಲೆಗೆ ಸ್ಲೇಟುಗಳು, ಪುಸ್ತಕಗಳು ಮೊದಲಾದುವು ದಾನವಾಗಿ ಬಂದದ್ದು – ಇವುಗಳೆಲ್ಲ ಸ್ವಲ್ಪ ಉತ್ಪ್ರ್‍ಏಕ್ಷೆಯಿಂದಲೇ […]