#ವಚನ

ಆನು ಪೇಳಿದೆಲ್ಲವನು ಮಾಡದೊಡೇನಂತೆ ?

0

ಆನು ಪೇಳಿದೆಲ್ಲವನು ಮಾಡದೊಡೇನಂತೆ ? ಆನಿಲ್ಲ ಪೇಳಿದೆಲ್ಲವನು ಆನು ಮಾಡಿ ದೆನೆಂದಿಲ್ಲ ಆನೆಷ್ಟು ಮಾಡಿಹನೆಂದು ಆನು ಪೇಳುವುದಲ್ಲ, ಬುದ್ಧಿಮಾತನು ಎನಗಾನೇ ಪೇಳಿ ಆದನಾನೇ ಕೇಳಿ ಆನೆಷ್ಟು ಮಾಡಿದರಷ್ಟು ಲಾಭವೆನಗೆ – ವಿಜ್ಞಾನೇಶ್ವರಾ *****

#ವಚನ

ಪರಿಪರಿ ನೆನೆದೊಡಾ ಐದೆನ್ನ ಕಾಯದೇ ?

0

ಪರಿಪರಿ ನೆನೆದೊಡಾ ಐದೆನ್ನ ಕಾಯದೇ ? ಪ್ರಕೃತಿಯೊಳೈದಕ್ಕೆ ಉನ್ನತದ ಬೆಲೆಯುಂಟು ಪಂಚಭೂತಂಗಳೆಲ್ಲ ಜೀವದೊಳುಂಟು ಪ್ರಾಣಂಗಳೆಮ್ಮೊಳೈದು ಇಂದ್ರಿಯಂಗಳೈದು ಪಿಡಿವ ನಡೆದ ಬೆರಳೈದು ಅಂತೆನ್ನ ಕವನಕು ಪಂಕ್ತಿಗಳೈದು – ಅದುವೆ ಕಾಯಲಿ ಎಂದೆನುತ – ವಿಜ್ಞಾನೇಶ್ವರಾ *****

#ವಚನ

ಪೇಳಲಾಪರಿ ಕಿರಿದಾಗಿ, ಬೇಕಲ್ಲಾ ಹಿರಿ ಪ್ರತಿಭೆ?

0

ಪೇಳಲಾಪರಿ ಕಿರಿದಾಗಿ, ಬೇಕಲ್ಲಾ ಹಿರಿ ಪ್ರತಿಭೆ? ಪೇಳಿಹರೆಮ್ಮ ಹಿರಿಯರವರ ಜೀವನ ದೊಳುಂಡನುಭವವ ಮೂರ್‌ನಾಕು ಸಾಲಿ ನೊಳು, ಮಂತ್ರದೊಳು, ಗಣಿತದೊಳು ಕೇಳಿದೆನಗಂತೆ ಕವನದ ಕಂತೆಯೊಳಿಡಲು ಬಾಳಿನನುಭವ ಸಾಲದೆನ್ನ ಸಾಲುಗಳೈದಾಗಿಹವು -ವಿಜ್ಞಾನೇಶ್ವರಾ *****

#ವಚನ

ಕವನವೆನ್ನದಿದ್ಯಾಕೆ ಪ್ರಶ್ನೋತ್ತರದಂತಿಹುದು?

0

ಕವನವೆನ್ನದಿದ್ಯಾಕೆ ಪ್ರಶ್ನೋತ್ತರದಂತಿಹುದು? ಜೀವನವೆಂದೊಡೇನದರ ಅಂದಾನಂದವದೇನು? ನಾವೇನು ಮಾಡಿದೊಡೇನು? ಮಾಡದೊಡೇನು? ತವಕದೊಳೇಳ್ವ ಪ್ರಶ್ನಾವಲಿಯ ಮೇಲೆಮ್ಮ ಜೀವನವೆ ನಿಂದಿಹುದದರಿಂದ ನಿಲಿಸಿಹೆನೆನ್ನ ಕವನಗಳ ಪರಿಪರಿಯ ಪ್ರಶ್ನೆಗಳ ಮೇಲೆ – ವಿಜ್ಞಾನೇಶ್ವರಾ *****

#ವಚನ

ಲಿಂಗಮ್ಮನ ವಚನಗಳು – ೧೦೧

0

ತನು ಕರಗಿತ್ತು. ಮನ ನಿಂದಿತ್ತು. ಉಲುಹು ಅಡಗಿತ್ತು. ನೆಲೆಗೆ ನಿಂದಿತ್ತು. ಮನ ಪವನ ಬಿಂದು ಒಡಗೂಡಿತ್ತು. ಉರಿ ಎದ್ದಿತ್ತು. ಊರ್ಧ್ವ ಕ್ಕೋಡಿತ್ತು. ಶರಧಿ ಬತ್ತಿತ್ತು. ನೊರೆ ತೆರೆ ಅಡಗಿತ್ತು. ಅಷ್ಟ ಮದವೆಲ್ಲ ಹಿಟ್ಟುಗುಟ್ಟಿತ್ತು. ಕರಣಂಗಳೆಲ್ಲ ಉರಿದು ಹೋಯಿತ್ತು. ಸಪ್ತ ಧಾತು ಕೆಟ್ಟಿತ್ತು. ರಸವರತಿತ್ತು. ಅಪ್ಪು ಬರತಿತ್ತು. ಕಟ್ಟಿ ಹಾಯ್ದ ಬಿಂದಿನಂತೆ ತೊಟ್ಟು ಬಿಟ್ಟು, ಬಟ್ಟಬಯಲೊಳಗೆ ಬಿದ್ದು, […]

#ವಚನ

ಲಿಂಗಮ್ಮನ ವಚನಗಳು – ೧೦೦

0

ಬೆಟ್ಟ ಬೆಂದಿತ್ತು. ಬಿದಿರುಗಣ್ಣು ಒಡೆದಿತ್ತು. ಸುತ್ತನೋಡಿದರೆ ನಿರಾಳವಾಯಿತ್ತು. ಕತ್ತಲೆ ಹರಿಯಿತ್ತು. ಮನ ಬತ್ತಲೆಯಾಯಿತ್ತು. ಚಿತ್ತ ಮನ ಬುದ್ಧಿ ಏಕವಾದವು. ಎಚ್ಚತ್ತು ನೋಡಿದರೆ, ಬಚ್ಚಬರಿಯ ಬೆಳಗಲ್ಲದೆ, ಕತ್ತಲೆಯ ಕಾಣಬಾರದು ಕಾಣಾ ಅಪ್ಪಣಪ್ರಿಯ ಚನ್ನಬಸವಣ್ಣಾ. *****

#ವಚನ

ಲಿಂಗಮ್ಮನ ವಚನಗಳು – ೯೯

0

ಮನ ಮಂಕಾಯಿತ್ತು. ತನುವು ಮರೆಯಿತ್ತು. ವಾಯು ಬರತಿತ್ತು. ಉರಿ ಎದ್ದಿತ್ತು. ಹೊಗೆ ಹರಿಯಿತ್ತು. ಸರೋವರವೆಲ್ಲ ಉರಿದು ಹೋಯಿತ್ತು. ಒಳಗೆ ಹೊಕ್ಕು ಕದವ ತೆಗೆದು ಬಯಲ ನೋಡಿ, ಬೆಳಗಕೂಡಿದಲ್ಲದೆ ನಿಜ ಮುಕ್ತಿ ಇಲ್ಲವೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****

#ವಚನ

ಲಿಂಗಮ್ಮನ ವಚನಗಳು – ೯೮

0

ನೋಡಿಹೆನೆಂದರೆ ನೋಟವಿಲ್ಲ. ಕೇಳಿಹೆನೆಂದರೆ ಕಿವಿ ಇಲ್ಲ. ವಾಸಿಸಿಹೆನೆಂದರೆ ನಾಸಿಕವಿಲ್ಲ. ನುಡಿದಿಹೆನೆಂದರೆ ಬಾಯಿಲ್ಲ. ಹಿಡಿದಿಹೆನೆಂದರೆ ಹಸ್ತವಿಲ್ಲ. ನಡೆದಿಹೆನೆಂದರೆ ಕಾಲಿಲ್ಲ. ನೆನೆದಿಹೆನೆಂದರೆ ಮನವಿಲ್ಲ. ಇಂತು ನೆನಹು ನಿಷ್ಪತ್ತಿಯಾಗಿ, ಶರಣರ ಪಾದಲ್ಲಿಯೆ ಬೆರೆದು ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

#ವಚನ

ಲಿಂಗಮ್ಮನ ವಚನಗಳು – ೯೭

0

ಅಂಗವ ಮರೆದಂಗೆ ಲಿಂಗದ ಹಂಗೇಕೊ? ಅರವ ಕಂಡವಂಗೆ ಕುರುಹಿನ ಹಂಗೇಕೊ? ತಾನು ತಾನಾದವಂಗೆ ಧ್ಯಾನದ ಹಂಗೇಕೊ? ಮನಮುಗ್ಧವಾದವಂಗೆ ಮಾನವರ ಹಂಗೇಕೊ? ಆಸೆಯನಳಿದವಂಗೆ ರೋಷದ ಹಂಗೇಕೊ? ಕಾಮನ ಸುಟ್ಟವಂಗೆ ಕಳವಳದ ಹಂಗೇಕೊ? ನಡೆಗೆಟ್ಟವಂಗೆ ನುಡಿಯ ಹಂಗೇಕೊ? ತನ್ನ ಮರೆದು ನಿಮ್ಮನರಿದ ಶರಣಂಗೆ ಅಲ್ಲೆ ಐಕ್ಯ ಕಂಡೆ ಅಪ್ಪಣಪ್ರಿಯ ಚನ್ನಬಸವಣ್ಣಾ. *****

#ವಚನ

ಲಿಂಗಮ್ಮನ ವಚನಗಳು – ೯೬

0

ಕಾಯವೆಂಬ ಕದಳಿಯ ಹೊಕ್ಕು, ಜೀವ ಪರಮರ ನೆಲೆಯನರಿದು, ರಸ, ರುಧಿರ, ಮಾಂಸ, ಮಜ್ಜೆ, ಮಿದುಳು, ಅಸ್ಥಿ, ಶುಕ್ಲ ಈ ಸಪ್ತ ಧಾತುಗಳ ಸಂಚವ ತಿಳಿದು, ಮತ್ತೆ ಮನ ಪವನ ಬಿಂದುವನೊಡಗೂಡಿ ಉತ್ತರಕ್ಕೇರಿ ನೋಡಲು, ಬಟ್ಟಬಯಲಾಗಿದ್ದಿತ್ತು. ಆ ಬಯಲಲ್ಲಿಯೆ ನಿಂದು, ನಿರಾಳದೊಳಗೂಡಿ, ಮಹಾಬೆಳಗನೆ ಕೂಡಿ ನಾ ನಿಜ ಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****